ಧರ್ಮ-ಜ್ಯೋತಿ:
2019 ರ ತುಲಾ ರಾಶಿ ಭವಿಷ್ಯ:
*ತುಲಾ ರಾಶಿ ಭವಿಷ್ಯ 2019 ರ ಪ್ರಕಾರ,ಈ ವರ್ಷ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ವೃತ್ತಿ ಜೀವನದಲ್ಲಿ ಕೂಡ ನಿಮಗೆ ಉತ್ತಮ ಫಲಿತಾಂಶಗಳು ದೊರೆಯುತ್ತವೆ,
*ಪ್ರಮುಖವಾಗಿ ಸಿನಿಮಾ ಕ್ಷೇತ್ರದಲ್ಲಿ ಇರುವ ಅಂಥವರಿಗೆ ಹೆಚ್ಚಿನ ಅಭಿವೃದ್ಧಿ,
*ಸ್ವಂತ ಬಿಸ್ನೆಸ್ ಮಾಡುವಂಥವರು ಈಗಾಗಲೇ ನಷ್ಟ ಹೊಂದಿದರು ಹೆಚ್ಚಿನ ಮಟ್ಟಿಗೆ ಲಾಭಾಂಶ ದೊರೆಯುತ್ತದೆ,ಮಾರ್ಚ್ ನಂತರ ನಿಮ್ಮ ಹೊಸ ವಿಚಾರಗಳು ನಿಮಗೆ ಯಶಸ್ಸು ತಂದುಕೊಡುತ್ತವೆ. ಉದ್ಯೋಗದಲ್ಲಿ ನಿಮಗೆ ಒಳ್ಳೆಯ ಅವಕಾಶಗಳು ದೊರೆಯುತ್ತವೆ. ಹಣಕಾಸಿನ ವಿಚಾರದಲ್ಲಿ ನಿಮಗೆ ನಿರೀಕ್ಷೆಗೆ ತಕ್ಕ ಫಲಿತಾಂಶಗಳು ದೊರೆಯುತ್ತವೆ.ಸಾಕಷ್ಟು ಅವಕಾಶಗಳು ದೊರೆಯುತ್ತವೆ. ಈ ವರ್ಷದ ಮಧ್ಯ ಭಾಗದಲ್ಲಿ ಮನೆ ಕರಿದಿ ಪಿತ್ರಾಜಿತ ಆಸ್ತಿ ವಿಚಾರದಲ್ಲಿ ಅನುಕೂಲ, ಕೊಟ್ಟ ದುಡ್ಡು ಕೈ ಸೇರುತ್ತೆ,
*ವಿದ್ಯಾರ್ಥಿಗಳು ಫೆಬ್ರವರಿ ಮಾರ್ಚ್ ತಿಂಗಳಲ್ಲಿ ಹೆಚ್ಚಿನ ಅಭ್ಯಾಸ ಬೇಕಾಗುತ್ತದೆ.
*ಮದುವೆ ಇನ್ನಿತರ ಶುಭ ಕಾರ್ಯಗಳು ಹೆಚ್ಚು ನಡೆಯುತ್ತೆ.
ಪರಿಹಾರ:
*ವಾರಕ್ಕೊಮ್ಮೆ ಮನೆದೇವರ ಆರಾಧಿಸುವುದು ಸೂಕ್ತ.
*ಪ್ರತಿ ತಿಂಗಳು ಸ್ವಾತಿ ನಕ್ಷತ್ರ ದಿಂದ ಲಕ್ಷ್ಮೀನರಸಿಂಹ ದೇವರಿಗೆ ಬೆಲ್ಲದ ದೀಪ ಹಚ್ಚುವುದು.