ಹಂಪಿ:
2020ನೇ ಸಾಲಿನ ಹಂಪಿ ಉತ್ಸವಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಅಧಿಕೃತವಾಗಿ ಚಾಲನೆ ಕೊಟ್ಟಿದ್ದಾರೆ . ಈ ಬಾರಿ ಹಂಪಿ ಉತ್ಸವದಲ್ಲಿ ಖ್ಯಾತ ಕೊಳಲುವಾದಕ ಪ್ರವೀಣ್ ಗೋಡ್ಕಿಂಡಿ, ಖ್ಯಾತ ಸಂಗೀತ ನಿರ್ದೇಶಕ ಮನೋಮೂರ್ತಿಯವರ ಸಂಗೀತ ಸೇರಿದಂತೆ, ಅನೇಕ ಕಾರ್ಯಕ್ರಮಗಳು ಹಂಪಿ ಉತ್ಸವಕ್ಕೆ ಮೆರಗು ತಂದುಕೊಡಲಿವೆ. ಅಲ್ದೇ, ಆಗಸದಿಂದ ಹಂಪಿ ಸೌಂದರ್ಯ ಸವಿಯಲು ‘ಹಂಪಿ ಬೈಸ್ಕೈ’, ಧ್ವನಿ ಮತ್ತು ಬೆಳಕಿನ ರೂಪಕ, ವಿಜಯನಗರ ಸಾಮ್ರಾಜ್ಯದ ಗತವೈಭವ,, ಮತ್ಸ್ಯ ಮೇಳ, ಸಾಹಸ ಕ್ರೀಡೆಗಳನ್ನು ಆಯೋಜಿಸಲಾಗಿದೆ…….