ಬೆಂಗಳೂರು:
ಬರೋಬ್ಬರಿ 90 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಕಳ್ಳತನ ಬಿಮಾಡಿ ಹಾರಕ್ಕೆ ಪರಾರಿಯಾಗಿದ್ದ ಖದೀಮನನ್ನು ಮಡಿವಾಳ ಪೊಲೀಸರು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.
ಅಖಿಲೇಶ್ ಕುಮಾರ್ (31) ಬಂಧಿತ ಆರೋಪಿ. ಈತ ಒಂದು ವರ್ಷದಿಂದ ಉದ್ಯಮಿ ಸತ್ಯಪ್ರಕಾಶ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಅಕ್ಟೋಬರ್ 17ರ ಮಧ್ಯಾಹ್ನ ಮನೆಯ ಲಾಕರ್ ಕಳ್ಳತನ ಮಾಡಿ ಇಂದಿರಾ ನಗರಕ್ಕೆ ತೆಗೆದುಕೊಂಡು ಹೋಗಿ ಹೊಡೆದು ಹಾಕಿ, ಸುಮಾರು 90 ಲಕ್ಷ ರೂ. ಮೌಲ್ಯದ ವಜ್ರ, ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ತುಂಬಿಕೊಂಡು ಬಿಹಾರಕ್ಕೆ ಪರಾರಿಯಾಗಿದ್ದ.
ಈ ಸಂಬಂಧ ಉದ್ಯಮಿ ಸತ್ಯಪ್ರಕಾಶ್ ಮಡಿವಾಳ ಠಾಣೆಗೆ ದೂರು ನೀಡಿದ್ದರು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪತ್ತೆಗಾಗಿ ಬಿಹಾರಕ್ಕೆ ತೆರಳಿ, ಮನೆಯನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದಾಗ, ಮನೆಯ ಹಿತ್ತಲಲ್ಲಿ ಆಭರಣಗಳನ್ನು ಹೂತಿಟ್ಟಿರುವುದು ಬಯಲಾಗಿದೆ. ಆಭರಣಗಳನ್ನು ಜಪ್ತಿ ಮಾಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ……