Breaking News

ಟಿಕ್‌ಟಾಕ್ ಸೇರಿ 59 ಚೀನಾ ಆ್ಯಪ್ ಬ್ಯಾನ್..!

ಚೀನಾ ಮೇಲೆ ಡಿಜಿಟಲ್ ಸ್ಟ್ರೈಕ್....

SHARE......LIKE......COMMENT......

ನವದೆಹಲಿ:

ಲಡಾಖ್ ಗಡಿಯಲ್ಲಿನ ಬಿಕ್ಕಟನ್ನು ಶಾಂತಿಯುತವಾಗಿ ಬಗೆಹರಿಸಲು ಭಾರತ ಇನ್ನಿಲ್ಲದ ಪ್ರಯತ್ನ ಮಾಡಿದೆ. ಆದರೆ ಚೀನಾ ಮತ್ತೆ ಖ್ಯಾತೆ ತೆಗೆಯುತ್ತಿದೆ. ಖ್ಯಾತೆ ತೆಗೆದ ಚೀನಾಗೆ ಇದೀಗ ಭಾರತ ಒಂದರ ಮೇಲೊಂದರಂತೆ ಹೊಡೆತ ನೀಡುತ್ತಿದೆ.ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ಚೀನಾದ 59 ಆ್ಯಪ್ ಬ್ಯಾನ್ ಮಾಡಿದೆ. ಈ ಮೂಲಕ ಚೀನಾಗೆ ಡಿಜಿಟಲ್ ಸ್ಟ್ರೈಕ್ ನೀಡಿದೆ. ಟಿಕ್‌ಟಾಕ್, ಶೇರ್ ಇಟ್, ಹೆಲೋ, ಯುಸಿ ಬ್ರೌಸರ್ ಸೇರಿದಂತೆ 59 ಆ್ಯಪ್‌ಗಳು ಭಾರತದಲ್ಲಿ ಬ್ಯಾನ್ ಆಗಿವೆ. ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಭಾರತದ ಸಮಗ್ರತೆ, ರಕ್ಷಣೆ, ಮತ್ತು ಸಾರ್ವಜನಿಕ ಭದ್ರತೆಗೆ ಧಕ್ಕೆ ಬರುತ್ತಿರುವ ಕಾರಣದಿಂದ ಚೀನಾ ಮೂಲದ 59 ಆ್ಯಪ್ ಬ್ಯಾನ್ ಮಾಡುತ್ತಿದೆ ಎಂದು ಕೇಂದ್ರ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೇಳಿದೆ.

ಡಾಟಾ ಸುರಕ್ಷತೆಗೆ ಸಂಬಂಧಿಸಿದ ಅಂಶಗಳು ಮತ್ತು 130 ಕೋಟಿ ಭಾರತೀಯರ ಗೌಪ್ಯತೆಯನ್ನು ಕಾಪಾಡುವಲ್ಲಿ ಈ ಆ್ಯಪ್‌ಗಳು ನಿಯಮ ಉಲ್ಲಂಘಿಸಿದೆ. ಇದು ಆತಂಕಕಾರಿ. ಇಂತಹ ಕಳವಳಗಳು ನಮ್ಮ ದೇಶದ ಸಾರ್ವಭೌಮತ್ವ ಮತ್ತು ಭದ್ರತೆಗೆ ಅಪಾಯವನ್ನುಂಟುಮಾಡುತ್ತವೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಹೇಳಿದೆ. ಭಾರತೀಯರ ಮಾಹಿತಿ ಶೇಖರಿಸಿಡಲು ಸ್ಥಳೀಯ ಸರ್ವರ್‌ಗಳನ್ನು ಮಾಡದೇ ವಿದೇಶದಲ್ಲಿ ಮಾಹಿತಿ ಶೇಖರಿಸಿಟ್ಟು ಸೋರಿಕೆ ಮಾಡುತ್ತಿದೆ. ಇದು ಬಳಕೆದಾರರ ಡೇಟಾವನ್ನು ಅನಧಿಕೃತ ರೀತಿಯಲ್ಲಿ ಕದಿಯಲು ಮತ್ತು ರಹಸ್ಯವಾಗಿ ರವಾನಿಸಲು ಆಂಡ್ರಾಯ್ಡ್ ಮತ್ತು IOS ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುವ ಹಾಗೂ ಕೆಲವು ಮೊಬೈಲ್ ಅಪ್ಲಿಕೇಶನ್‌ಗಳ ದುರುಪಯೋಗದ ಬಗ್ಗೆ ಹಲವಾರು ದೂರಗಳು ಬಂದಿವೆ. ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಧಕ್ಕೆ ತರುವ ಗಂಭೀರ ವಿಚಾರವಾಗಿದ್ದು, ತುರ್ತು ಕ್ರಮಗಳ ಅಗತ್ಯವಿದೆ. ಹೀಗಾಗಿ 59 ಆ್ಯಪ್ ಬ್ಯಾನ್ ಮಾಡುತ್ತಿದೆ ಎಂದಿದೆ……