ದೆಹಲಿ:
ದೆಹಲಿಯ JNU ಕ್ಯಾಂಪಸ್ನಲ್ಲಿ ನಡೆದ ದಾಳಿ ಖಂಡಿಸಿ ಪ್ರತಿಭಟನೆ ನಡೆಯುತ್ತಿವೆ. ರಾತ್ರಿಯಿಂದಲೂ ದೆಹಲಿಯ ಹಲವೆಡೆ ವಿದ್ಯಾರ್ಥಿ ಸಂಘಟನೆಗಳ ಜತೆ ವಿವಿಧ ಸಂಘಟನೆಗಳು ರಸ್ತೆಯಲ್ಲೇ ಧರಣಿ ನಡೆಸಿದವು. ದೆಹಲಿ ಪೊಲೀಸ್ ಕಮಿಷನರ್ ಜತೆ ರಾತ್ರಿಯೇ ಫೋನ್ನಲ್ಲಿ ಮಾತ್ನಾಡಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಹಿತಿ ಪಡೆದುಕೊಂಡರು. ಘಟನೆಯ ತನಿಖೆಗೆ ಆದೇಶ ಮಾಡಿದ್ದು, ಎಡ ಸಂಘಟನೆ, ಎಬಿವಿಪಿ ಮತ್ತು ಜೆಎನ್ಯು ಆಡಳಿತ ಮಂಡಳಿ ಮೂರು ಪ್ರತ್ಯೇಕ ದೂರುಗಳನ್ನು ದಾಖಲಿಸಿವೆ. ಮುಖಕ್ಕೆ ಬಟ್ಟೆ ಸುತ್ತಿಕೊಂಡು ಒಳ ಪ್ರವೇಶ ಮಾಡಿದ್ದ ದುಷ್ಕರ್ಮಿಗಳು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಮೇಲೆ ಹಲ್ಲೆ ನಡೆಸಿದ್ದರು. ಘಟನೆಯಲ್ಲಿ 30ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದವು. ಮತ್ತೊಂದೆಡೆ ಜೆಎನ್ಯು ರಿಜಿಸ್ಟ್ರಾರ್ ಜತೆ ಕೇಂದ್ರ ಮಾನವ ಸಂಪನ್ಮೂಲ ಸಚಿವರು ಮಾಹಿತಿ ಪಡೆದುಕೊಂಡಿದ್ದಾರೆ…..