Breaking News

ಪ್ರೀತಿ ಇಲ್ಲದ ವ್ಯಕ್ತಿ ಜೊತೆ ಬಾಳ್ವೆ ಮಾಡ್ಬಹುದು ಆದ್ರೆ ಅನುಮಾನ ಪಿಶಾಚಿ ಜೊತೆ ಅಸಾಧ್ಯ..!

ಕೆಲ ಟಿಪ್ಸ್ ಬಳಸಿ ದಾಂಪತ್ಯದ ಸುಖ ಹೆಚ್ಚಿಸಿಕೊಳ್ಳಿ....

SHARE......LIKE......COMMENT......

ಸರಳ ಪರಿಹಾರ:

ಪ್ರೀತಿ ಇಲ್ಲದ ವ್ಯಕ್ತಿ ಜೊತೆ ಬಾಳ್ವೆ ಮಾಡ್ಬಹುದು ಆದ್ರೆ ಅನುಮಾನ ಪಿಶಾಚಿ ಜೊತೆ ಅಸಾಧ್ಯ ಎಂಬ ಮಾತನ್ನು ನೀವು ಕೇಳಿರ್ಬಹುದು. ಅನೇಕ ಬಾರಿ ನಮ್ಮ ವರ್ತನೆಯೇ ಸಂಗಾತಿ ಅನುಮಾನಕ್ಕೆ ಕಾರಣವಾಗುತ್ತದೆ. ಹೆಜ್ಜೆ ಹೆಜ್ಜೆಗೂ ಅನುಮಾನಪಡುವ ಬದಲು ಕೆಲ ಟಿಪ್ಸ್ ಬಳಸಿ ದಾಂಪತ್ಯದ ಸುಖ ಹೆಚ್ಚಿಸಿಕೊಳ್ಳಿ.

ಆರಂಭದಲ್ಲಿ ಪ್ರತಿಯೊಂದು ಸಂಬಂಧ (Relationship) ವೂ ಸಿಹಿ (Sweet) ಯಾಗಿರುತ್ತದೆ. ದಂಪತಿ (Couple) ಮಧ್ಯೆಯೂ ಇದು ನೂರಕ್ಕೆ ನೂರು ನಿಜ. ಪರಸ್ಪರ ಅರ್ಥ ಮಾಡಿಕೊಂಡು ಅದನ್ನು ಬ್ಯಾಲೆನ್ಸ್ ಮಾಡುವುದು ಸುಲಭದ ಕೆಲಸವಲ್ಲ. ದಂಪತಿ ಮಧ್ಯೆ ಸದಾ ಪ್ರೀತಿ ಇರಬೇಕೆಂದ್ರೆ ಪ್ರಾಮಾಣಿಕ ಅಡಿಪಾಯ ಬೇಕು. ಅನೇಕರು ಆರಂಭದಲ್ಲಿ ಸುಳ್ಳಿನ ಮನೆ ಕಟ್ಟುತ್ತಾರೆ. ಸಂಗಾತಿ ಮೆಚ್ಚಿಸುವ ಪ್ರಯತ್ನ ಮಾಡ್ತಾರೆ. ಆದ್ರೆ ದಿನ ಕಳೆದಂತೆ ಒಂದೊಂದೇ ಬಣ್ಣ ಹೊರ ಬರಲು ಶುರುವಾಗುತ್ತದೆ. ಇದ್ರಿಂದ ಸುಖಮಯವಾಗಿ ಸಾಗ್ಬೇಕಿದ್ದ ಬದುಕು ಜಗಳದಲ್ಲಿ ಅಂತ್ಯವಾಗುತ್ತದೆ. ಆರಂಭದಲ್ಲಿ ಹೇಳಿದ್ದ ಸುಳ್ಳುಗಳು ಚುಚ್ಚಲು ಶುರು ಮಾಡುತ್ತವೆ.

ಇದೇ ಕಾರಣಕ್ಕೆ ಸಂಗಾತಿ ಮೇಲೆ ಅನುಮಾನ ಮೂಡುತ್ತದೆ. ಪ್ರತಿ ಬಾರಿ ಸಂಗಾತಿ ಮೇಲಿನ ಅನುಮಾನ ಸತ್ಯವಾಗಿರುವುದಿಲ್ಲ. ತಪ್ಪಾಗಿ ನಮ್ಮನ್ನು ಅವರು ಅರ್ಥೈಸಿಕೊಂಡಿರುತ್ತಾರೆ. ಆದ್ರೆ ಒಮ್ಮೆ ಅಂಟಿದ ಅನುಮಾನದ ಭೂತ ಮಾತ್ರ ಅವರ ಬೆನ್ನು ಬಿಡುವುದಿಲ್ಲ. ಸಣ್ಣ ಸಣ್ಣ ಸಂಗತಿಗೆ ಅವರು ಸಂಗಾತಿಯನ್ನು ಅನುಮಾನಿಸಲು ಶುರು ಮಾಡ್ತಾರೆ. ಇದು ದಾಂಪತ್ಯ ಸುಖವನ್ನು ಹಾಳು ಮಾಡುತ್ತದೆ. ನಮ್ಮ ನೆಮ್ಮದಿ ಕೆಡಿಸುತ್ತದೆ. ಹಾಗೆ ನಾವು ಮಾಡುವ ಕೆಲ ತಪ್ಪುಗಳು ಕೂಡ ಸಂಗಾತಿಯಲ್ಲಿ ಅನುಮಾನ ಮೂಡಲು ಕಾರಣವಾಗುತ್ತದೆ. ನಾವು ಮಾಡುವ ಯಾವ ತಪ್ಪಿನಿಂದ ಈ ಅನುಮಾನ ಚಿಗುರೊಡೆಯುತ್ತದೆ ಎಂಬುದನ್ನು ಇಂದು ಹೇಳ್ತೇವೆ.

ಸಂಗಾತಿಗೆ ಸಮಯ ನೀಡದಿರುವುದು :

ಕೆಲಸದ ಒತ್ತಡ ಅಥವಾ ಬೇರೆ ಕಾರಣಕ್ಕೆ ಸಂಗಾತಿಗಹೆ ಸಮಯ ನೀಡಲು ಸಾಧ್ಯವಾಗುವುದಿಲ್ಲ. ನಿಮ್ಮ ಈ ನಿರಂತರ ಕೆಲಸ ಕಾರಣಕ್ಕೆ ಅವರು ನಿಮ್ಮನ್ನು ತಪ್ಪಾಗಿ ಅರ್ಥಮಾಡಿಕೊಳ್ಳಲು ಪ್ರಾರಂಭಿಸುತ್ತಾರೆ. ಇದು ಸ್ವಲ್ಪ ಸಮಯದವರೆಗೆ ನಿರಂತರವಾಗಿ ನಡೆದಾಗ ಅನುಮಾನಗಳು ಹೆಚ್ಚಾಗುತ್ತವೆ. ಸಂಗಾತಿ ವಿನಃ ಅನುಮಾನಕ್ಕೊಳಗಾಗಬಾರದು ಅಂದ್ರೆ ಸಂಗಾತಿ ಜೊತೆ ನೀವು ಮಾತನಾಡ್ಬೇಕು. ಅವರಿಗೆ ಸಮಯ ನೀಡುವ ಭರವಸೆ ನೀಡ್ಬೇಕು. ಇಲ್ಲವೆ ಸಮಯ ನೀಡದಿರಲು ಕಾರಣವೇನು ಎಂಬುದನ್ನು ಅವರಿಗೆ ವಿವರಿಸಬೇಕು. ಒಂದ್ವೇಳೆ ನಿಮ್ಮ ಸಂಗಾತಿ ನಿಮಗೆ ಸಮಯ ನೀಡ್ತಿಲ್ಲ ಎನ್ನಿಸಿದ್ರೆ ಮೊದಲು ಅವರನ್ನು ಗಮನಿಸಿ. ಅವರು ನಿಜವಾಗಿಯೂ ಕೆಲಸದಲ್ಲಿ ನಿರತರಾಗಿದ್ದರೆ ಅದನ್ನು ಸ್ವೀಕರಿಸಿ.

ಗಂಟೆಗಳ ಕಾಲ ಕಳೆದು ಹೋಗುವುದು :

ದಂಪತಿ ಮಧ್ಯೆ ಗಲಾಟೆ ನಡೆದಾಗ ಅಥವಾ ಗೊಂದಲ ಮೂಡಿದಾಗ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಲು ಕೆಲವರು ಮನೆಯಿಂದ ಹೊರಗೆ ಹೋಗ್ತಾರೆ. ಗಂಟೆಗಟ್ಟಲೆ ಮನೆಗೆ ಬರುವುದಿಲ್ಲ. ಜೊತೆಗೆ ಫೋನ್ ಗೆ ಉತ್ತರ ನೀಡುವುದಿಲ್ಲ. ಇಂಥ ಸಮಯದಲ್ಲಿ ಅನುಮಾನ ಮೂಡುವುದು ಸಹಜ. ಸಂಗಾತಿ ಬೇರೆಯವರೊಂದಿಗೆ ಸಂಬಂಧ ಹೊಂದಿದ್ದಾರೆಂಬ ಭಾವನೆ ಬರುತ್ತದೆ. ಸುಮ್ಮನೆ ಅನುಮಾನಪಡುವ ಬದಲು ಅವರನ್ನು ಅರ್ಥ ಮಾಡಿಕೊಳ್ಳಬೇಕು. ಇಬ್ಬರೂ ಇದ್ರ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡ್ಬೇಕು.

ಫೋನ್ ಮೇಲೆ ಕಣ್ಣು :

ಸಂಗಾತಿ ಫೋನ್ ಮೇಲೆ ಕಣ್ಣು ಬಿದ್ದಿರುತ್ತದೆ. ಅನೇಕರು ಫೋನ್ ಪರಿಶೀಲಿಸುತ್ತಾರೆ. ಆದ್ರೆ ಹಾಗೆ ಮಾಡುವುದು ಒಳ್ಳೆಯದಲ್ಲ. ಒಂದ್ವೇಲೆ ಅಪರೂಪಕ್ಕೆ ಸಂಗಾತಿ ಫೋನ್ ಕೇಳಿದ್ರೆ ಅದನ್ನು ನಿರಾಕರಿಸುವುದು ಕೂಡ ಒಳ್ಳೆಯದಲ್ಲ. ಇದು ಸಂಗಾತಿ ಅನುಮಾನವನ್ನು ಹೆಚ್ಚು ಮಾಡುತ್ತದೆ. ಫೋನ್ ನೀಡಿಲ್ಲ ಎಂಬ ಕಾರಣಕ್ಕೆ ಅವರನ್ನು ಅನುಮಾನಿಸುವ ಬದಲು, ಅವರು ನಿಮ್ಮಿಂದ ಏನನ್ನಾದರೂ ಮರೆಮಾಡಲು ಪ್ರಯತ್ನಿಸುತ್ತಿದ್ದಾರೆಯೇ ಎಂಬುದನ್ನು ಕೇಳಿ. ಅನುಮಾನಕ್ಕಿಂತ ನೇರ ಮಾತುಕತೆ ಬಹಳ ಒಳ್ಳೆಯದು. ಆ ಕ್ಷಣಕ್ಕೆ ಜಗಳವಾದ್ರೂ ಸಂಬಂಧ ಪಾರದರ್ಶಕವಾಗಿರುತ್ತದೆ. ಇದ್ರಿಂದ ದಾಂಪತ್ಯ ಗಟ್ಟಿಯಾಗುತ್ತದೆ. ಕಚೇರಿಯಲ್ಲಿ ಸಹೋದ್ಯೋಗಿ ಜೊತೆ ಮಾತನಾಡಿದ್ರೂ ಅನುಮಾನಿಸುವ ಸಂಗಾತಿ ಜೊತೆ ಜೀವನ ನಡೆಸುವುದು ಕಷ್ಟವಾಗುತ್ತದೆ. ಒಂದು ರೀತಿಯ ಭಯ ಸದಾ ಮನೆ ಮಾಡಿರುತ್ತದೆ. ಆದ್ರೆ ಇಬ್ಬರೂ ಕುಳಿತು ಮಾತುಕತೆ ನಡೆಸಿದಾಗ ಎಲ್ಲವೂ ತಿಳಿಯಾಗುತ್ತದೆ……