ಹೈದರಾಬಾದ್:
ದೇಶದ ಯಾವುದೇ ಮಸೀದಿಯಲ್ಲಿ ಉತ್ಖನನ ನಡೆದರೂ ಅಲ್ಲಿ ಶಿವಲಿಂಗ ಸಿಗುತ್ತಿದೆ. ಮಸೀದಿಯಲ್ಲಿ ಶವ ಸಿಕ್ಕರೆ ಅದು ನಿಮ್ಮದು, ಶಿವಲಿಂಗ ಸಿಕ್ಕರೆ ಅದು ನಮ್ಮದು ಎಂದು ತೆಲಂಗಾಣದ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಕುಮಾರ್ ಹೇಳಿದ್ದಾರೆ. ಭಾರತದ ಯಾವುದೇ ಮಸೀದಿಗಳಲ್ಲಿ ಉತ್ಖನನ ಕಾರ್ಯ ನಡೆಸಿ ನೋಡಿದರೂ ಅಲ್ಲಿ ಶಿವಲಿಂಗ ಪತ್ತೆಯಾಗುತ್ತಿವೆ. ನಾವು ತೆಲಂಗಾಣದ ಪ್ರತಿಯೊಂದು ಮಸೀದಿಯಲ್ಲಿಯೂ ಉತ್ಖನನ ಕಾರ್ಯ ನಡೆಸುತ್ತೇವೆ ಎಂದು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರಿಗೆ ಬಂಡಿ ಸಂಜಯ್ ಕುಮಾರ್ ಸವಾಲು ಹಾಕಿದ್ದಾರೆ.
‘ದೇಶದ ಯಾವುದೇ ಮಸೀದಿಗಳಲ್ಲಿ ಉತ್ಖನನ ನಡೆಸುವಾಗ ಶವ ಸಿಕ್ಕರೆ ಅದು ನಿಮ್ಮದು, ಒಂದು ವೇಳೆ ಶಿವಲಿಂಗ ಸಿಕ್ಕರೆ ಅದರು ನಮ್ಮದು. ನೀವು ಈ ಸವಾಲಿಗೆ ಸಿದ್ಧರಾಗಿದ್ದೀರಾ? ಎಂದು ಸಂಜಯ್ ಕುಮಾರ್ ಪ್ರಶ್ನಿಸಿದ್ದಾರೆ. ದೇಶದಲ್ಲಿ ರಾಜರಾಜ್ಯ ಬಂದರೆ ನಾವು ಉರ್ದು ಭಾಷೆಯನ್ನು ಸಂಪೂರ್ಣವಾಗಿ ನಿಷೇಧಿಸುತ್ತೇವೆ. ಮದರಸಾಗಳು ಭಯೋತ್ಪಾದಕರ ತರಬೇತಿ ಕೇಂದ್ರಗಳಾಗಿ ಮಾರ್ಪಟ್ಟಿವೆ. ಇಲ್ಲಿ ಉಗ್ರರಿಗೆ ತರಬೇತಿ ನೀಡುತ್ತಿರುವುದರಿಂದಲೇ ದೇಶದಲ್ಲಿ ಬಾಂಬ್ ಸ್ಫೋಟ ಪ್ರಕರಣಗಳು ನಡೆಯುತ್ತಿವೆ. ಹೀಗಾಗಿ ಅವರನ್ನು ನಾವು ಗುರುತಿಸಬೇಕಿದೆ ಎಂದು ಹೇಳಿದ್ದಾರೆ……
If 'Rama Rajya' comes, we will completely ban Urdu language. In the country wherever bomb blasts take place, it's because Madrasas have become the training centers for terrorists…We should identify them: Telangana BJP chief Bandi Sanjay Kumar(25.05) pic.twitter.com/F9YsL9FzjD
— ANI (@ANI) May 26, 2022