Breaking News

ಬಂಟ್ವಾಳ ತಾಲೂಕಿನ ನೈನಾಡಿನ ನಡು ರಸ್ತೆಯಲ್ಲಿ ಎಚ್ಚರಿಕೆ ಸಂದೇಶ..!

PFI ಹೆಸರಿನಲ್ಲಿರುವ ಚಡ್ಡಿಗಳೇ ಎಚ್ಚರಿಕೆ ಎಂಬ ಬರಹ....

SHARE......LIKE......COMMENT......

ಬೆಂಗಳೂರು:

ಇಂತಹ ಪ್ರಚೋದನಕಾರಿ ಹೇಳಿಕೆಯನ್ನು ಜಿಲ್ಲೆಯ ಬಂಟ್ವಾಳ ತಾಲೂಕಿನ ನೈನಾಡಿನ ನಡು ರಸ್ತೆಯಲ್ಲಿ ಎಚ್ಚರಿಕೆ ಸಂದೇಶವನ್ನು ನೀಡಲಾಗಿದೆ. ಇತ್ತೀಚೆಗಷ್ಟೆ ಕೇಂದ್ರ ಸರ್ಕಾರ ಐದು ವರ್ಷಗಳ ಕಾಲ ನಿಷೇಧ ಹೇರಿರುವ ಪಿಎಫ್‍ಐ ಕಾರ್ಯಕರ್ತರು ಬರೆದಿದ್ದಾರೆ ಎನ್ನಲಾದ ಈ ಬರಹ ಇದೀಗ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಿಂದೂ ಜಾಗರಣ ಕಾರ್ಯಕರ್ತರು ಸೇರಿದಂತೆ ಮತ್ತಿತರ ಸಂಘಟನೆಗಳ ಮುಖಂಡರು ಆಗಮಿಸಿ ಈ ಬರಹ ಬರೆದಿರುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಪರಿಸ್ಥಿತಿಯನ್ನು ನಿಭಾಯಿಸಲು ಹರ ಸಾಹಸಪಟ್ಟರು.

ಕಳೆದ ರಾತ್ರಿ ನೈನಾಡಿನ ನಡು ರಸ್ತೆಯಲ್ಲಿ ಪಿಎಫ್‍ಐ ಹೆಸರಿನಲ್ಲಿರುವ ಚಡ್ಡಿಗಳೇ ಎಚ್ಚರಿಕೆ. ನಾವು ಮತ್ತೆ ಬರುತ್ತೇವೆ ಎಂಬ ಬರಹ ಹಿಂದೂ ಸಂಘಟನೆಗಳನ್ನು ಕೆರಳುವಂತೆ ಮಾಡಿದೆ. ಮೊದಲೇ ಕೋಮುಗಲಭೆ ಹಾಗೂ ಸಂಘರ್ಷಗಳಿಂದ ಉದ್ವಿಗ್ನವಾಗಿರುವ ಬಂಟ್ವಾಳ ಈ ಘಟನೆಯಿಂದ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಯಿತು. ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸುವುದಾಗಿ ಪೊಲೀಸರು ಆಶ್ವಾಸನೆ ನೀಡಿದ್ದರಿಂದ ಪ್ರತಿಭಟನಾ ನಿರತರು ತಮ್ಮ ಧರಣಿಯನ್ನು ಹಿಂಪಡೆದರು. ಒಂದು ವೇಳೆ ಕಿಡಿಗೇಡಿಗಳನ್ನು ಬಂದಿಸದಿದ್ದರೆ ರಸ್ತೆಗಿಳಿದು ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕೇಂದ್ರ ಸರ್ಕಾರ ಪಿಎಫ್‍ಐ ಮತ್ತು ಅದರ ಸಹ ಸಂಸ್ಥೆಗಳನ್ನು ನಿಷೇಧ ಮಾಡಿದ ನಂತರ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸೇರಿದಂತೆ ರಾಜ್ಯದಲ್ಲಿರುವ ಎಲ್ಲಾ ಪಿಎಫ್‍ಐ ಕಚೇರಿಗಳಿಗೆ ಬೀಗ ಜಡಿಯಲಾಗಿದೆ. ಕೆಲ ದಿನಗಳ ಹಿಂದೆ ಜಿಲ್ಲೆಯಲ್ಲಿ ಮಿಂಚಿನ ದಾಳಿ ನಡೆಸಿದ್ದ ಎನ್‍ಐಎ ಅಧಿಕಾರಿಗಳು ಪಿಎಫ್‍ಐ ಸಂಘಟನೆಗೆ ಸೇರಿದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರನ್ನು ಬಂಧಿಸಿ ಜೈಲಿಗಟ್ಟಿದೆ. ಇದರ ಬೆನ್ನಲ್ಲೇ ಕಳೆದ ವಾರ ಕೇಂದ್ರದ ಸರ್ಕಾರ ಈ ಸಂಘಟನೆಯ ಎಲ್ಲಾ ಚಟುವಟಿಕೆಗಳಿಗೂ ಐದು ವರ್ಷಗಳ ಕಾಲ ನಿಷೇಧ ಹೇರಿದೆ……