ಬೆಂಗಳೂರು:
KGF ಬಾಬು ಮೇಲೆ IT ರೇಡ್ ಆಗಿದ್ದು, ಕೆಜಿಎಫ್ ಬಾಬುಗೆ ಸೇರಿದ ಎರಡು ಕಡೆ ದಾಳಿ ನಡೆಸಲಾಗಿದೆ. ವಸಂತ ನಗರ ಸೇರಿ ಎರಡು ಕಡೆ ಪರಿಶೀಲನೆ ಮಾಡಲಾಗುತ್ತಿದೆ. ರೇಡ್ ಮಾಡಿದ ವೇಳೆ KGF ಬಾಬು ಮನೆಯಲ್ಲೇ ಇದ್ದು, ಇತ್ತೀಚೆಗೆ MLC ಎಲೆಕ್ಷನ್ಗೂ ಸ್ಪರ್ಧೆ ಮಾಡಿದ್ದರು.
ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆ ಪರಿಶೀಲನೆ ನಡೆಸಲಾಗುತ್ತಿದ್ದು, ಕೆಜಿಎಫ್ ಬಾಬು ಖ್ಯಾತ ಉದ್ಯಮಿಯೂ ಆಗಿದ್ದಾರೆ. ರುಕ್ಸಾನಾ ಪ್ಯಾಲೇಸ್ ಹಾಗೂ ಎದುರಿನ ಮನೆಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಆದಾಯದ ಮೂಲಗಳು, ತೆರಿಗೆ ಪಾವತಿ ಮಾಹಿತಿ ಸಂಗ್ರಹ ಮಾಡಲಾಗುತ್ತಿದ್ದು, 6 ಇನೋವಾ ಕಾರುಗಳಲ್ಲಿ ಬಂದಿದ್ದ 20ಕ್ಕೂ ಹೆಚ್ಚು ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ಕೆಜಿಎಫ್ ಬಾಬು ಘೋಷಿತ ಆಸ್ತಿಯೇ 1741 ಕೋಟಿಯಾಗಿದ್ದು, ಬಾಬು ಕುಟುಂಬಸ್ಥರು ಒಟ್ಟು 23 ಬ್ಯಾಂಕ್ ಖಾತೆ ಹೊಂದಿದ್ದಾರೆ. KGF ಬಾಬು 12 ಬ್ರಾಂಚ್ಗಳಲ್ಲಿ ಅಕೌಂಟ್ ಹೊಂದಿದ್ದು, KGF ಬಾಬು MLC ಎಲೆಕ್ಷನ್ ವೇಳೆ ಆಸ್ತಿ-ಪಾಸ್ತಿ ಅಫಿಡವಿಟ್ ನೀಡಿದ್ದರು.
ಬೆಂಗಳೂರು ಅಲ್ಲದೇ ಮೈಸೂರಿನಲ್ಲೂ ಐಟಿ ಅಧಿಕಾರಿಗಳು ಕೆಜಿಎಫ್ ಬಾಬು ಸಂಬಂಧಿಕರಿಗೆ ಶಾಕ್ ನೀಡಿದ್ದಾರೆ. ಮೈಸೂರು ಪಾಲಿಕೆಯ ವಾರ್ಡ್ 17ರ ಸದಸ್ಯೆ ರೇಷ್ಮಾ ಬಾನು ಮನೆ ಮೇಲೆ ಐಟಿ ದಾಳಿ ಆಗಿದೆ. ಪಾಲಿಕೆ ಸದಸ್ಯೆ ಪತಿ ರೆಹಮಾನ್ ಖಾನ್ ಆದಾಯದ ಬಗ್ಗೆ ಪರಿಶೀಲನೆ ನಡೆಸಲಾಗ್ತಿದೆ. ರೆಹ್ಮಾನ್ ಕೆಜಿಎಫ್ ಬಾಬು ಸಂಬಂಧಿಯಾಗಿದ್ದಾರೆ…..