Breaking News

ಈ ವೇಗದಲ್ಲಿ ಕೊಹ್ಲಿ ಶತಕ ಬಾರಿಸುತ್ತಿದ್ದರೆ ಸಚಿನ್ ದಾಖಲೆ ಉಡೀಸ್?

ಸರಾಸರಿ 5 ಇನ್ನಿಂಗ್ಸ್ ಗೊಂದು ಶತಕ...

SHARE......LIKE......COMMENT......

ನವದೆಹಲಿ: 

ಯಶಸ್ಸಿನ ಉತ್ತುಂಗದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ದಾಖಲೆಗಳ ಹಿಂದೆ ಬಿದ್ದಿದ್ದಾರೆ ಎನಿಸುತ್ತಿದೆ. ಈ ಹಿಂದೆ ಸಚಿನ್ ರ ಹಲವು ದಾಖಲೆಗಳನ್ನು ಪುಡಿಗಟ್ಟಿದ್ದ ಕೊಹ್ಲಿ ಇತ್ತೀಚೆಗಷ್ಟೇ ಸಚಿನ್ 10, 000 ರನ್ ಗಳ  ದಾಖಲೆಯನ್ನು ಮುರಿದಿದ್ದರು.

ಇದೀಗ ಕೊಹ್ಲಿ ಸಚಿನ್ ರ ಮತ್ತೊಂದು ಮಹತ್ವದ ದಾಖಲೆ ಹಿಂದೆ ಬಿದ್ದಿದ್ದು, ಇದೇ ವೇಗದಲ್ಲಿ ಅವರ ಬ್ಯಾಟ್ ಅಬ್ಬರಿಸುತ್ತಿದ್ದರೆ ಆ ದಾಖಲೆ ಮುರಿಯುವುದು ಕೂಡ ಕಷ್ಟವೇನೂ ಅಲ್ಲ.

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಒಟ್ಟು 463 ಪಂದ್ಯಗಳನ್ನಾಡಿದ್ದು, ಈ ಪೈಕಿ 452 ಇನ್ನಿಂಗ್ಸ್ ಗಳಲ್ಲಿ ಒಟ್ಟು 18,426 ರನ್ ಗಳನ್ನು ಪೇರಿಸಿದ್ದಾರೆ. ಈ ಪೈಕಿ 49 ಶತಕಗಳೂ ಕೂಡ ಸೇರಿದ್ದು, ಸಚಿನ್ ತಮ್ಮ ಒಟ್ಟಾರೆ ಇನ್ನಿಂಗ್ಸ್ ಗಳಲ್ಲಿ ಪ್ರತೀ ಶತಕಕ್ಕೆ ತೆಗೆದುಕೊಂಡಿರುವುದು ಸರಾಸರಿ 9.22 ಇನ್ನಿಂಗ್ಸ್ ಗಳನ್ನು. ಇದೇ ಲೆಕ್ಕಾಚಾರವನ್ನು ಕೊಹ್ಲಿಗೆ ಅನ್ವಯಿಸಿ ನೋಡುವುದಾದರೆ, ರನ್ ಮೆಷಿನ್ ವಿರಾಟ್ ಕೊಹ್ಲಿ ಒಟ್ಟು 213 ಪಂದ್ಯಗಳ ಪೈಕಿ ಒಟ್ಟು 205 ಇನ್ನಿಂಗ್ಸ್ ಗಳನ್ನಾಡಿದ್ದು, ಈ ಪೈಕಿ 10,076 ರನ್ ಗಳನ್ನು ಪೇರಿಸಿದ್ದಾರೆ.

ಈ ಪೈಕಿ ಈಗಾಗಲೇ ಕೊಹ್ಲಿ 37 ಶತಕ ಸಿಡಿಸಿದ್ದು, ಅದರಂತೆ ಕೊಹ್ಲಿ ಸರಾಸರಿ ಪ್ರತೀ 5.54 ಇನ್ನಿಂಗ್ಸ್ ಗೆ ಒಂದರಂತೆ ಶತಕ ಸಿಡಿಸಿದ್ದಾರೆ. ಆ ಮೂಲಕ ಸಚಿನ್ ಏಕದಿನದಲ್ಲಿ ಸಿಡಿಸಿರುವ 49 ಶತಕಗಳ ದಾಖಲೆಯನ್ನು ಸರಿಗಟ್ಟಲು ಕೊಹ್ಲಿಗೆ ಇನ್ನು 12 ಶತಕಗಳಷ್ಟೇ ಬಾಕಿ ಇದೆ.

ಒಂದು ವೇಳೆ ಕೊಹ್ಲಿ ಇದೇ ವೇಗದಲ್ಲಿ ಶತಕಗಳ ಸಿಡಿಸಿದರೆ ಏಕದಿನದಲ್ಲಿ ಸಚಿನ್ ರ ದಾಖಲೆಯನ್ನು ಖಂಡಿತಾ ಸರಿಗಟ್ಟುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ……