Breaking News

ಕ್ರಿಸ್ಪಿ ಪಾಲಾಕ್ ಪಕೋಡಾ..!

SHARE......LIKE......COMMENT......

ಕ್ರಿಸ್ಪಿ ಪಾಲಾಕ್ ಪಕೋಡಾಗೆ ಬೇಕಾಗುವ ಪದಾರ್ಥಗಳು..

*ಕಡಲೆ ಹಿಟ್ಟು- 1 ಬಟ್ಟಲು

*ಅಕ್ಕಿ ಹಿಟ್ಟು- 2 ಚಮಚ

*ಅರಿಶಿಣದ ಪುಡಿ- ಕಾಲು ಚಮಚ

*ಅಚ್ಚ ಖಾರದ ಪುಡಿ- ಮುಕ್ಕಾಲು ಚಮಚ

*ಓಂ ಕಾಳು- ಕಾಲು ಚಮಚ

*ಇಂಗು- ಚಿಟಿಕೆ

*ಉಪ್ಪು- ರುಚಿಗೆ ತಕ್ಕಷ್ಟು

*ಅಡುಗೆ ಸೋಡಾ- ಕಾಲು ಚಮಚ

*ಪಾಲಾಕ್ ಸೊಪ್ಪಿನ ಎಲೆ- 10-15

*ಎಣ್ಣೆ- ಅಗತ್ಯಕ್ಕನುಗುಣವಾಗಿ

ಕ್ರಿಸ್ಪಿ ಪಾಲಾಕ್ ಪಕೋಡಾ ಮಾಡುವ ಸುಲಭ ಬೇಕಾಗುವ ವಿಧಾನಗಳು:

* ಮೊದಲಿಗೆ ಕಡಲೆ ಹಿಟ್ಟು, ಅಕ್ಕಿ ಹಿಟ್ಟನ್ನು ಮಿಶ್ರಣ ಮಾಡಿಕೊಂಡು ಅದಕ್ಕೆ ಅರಿಶಿಣದ ಪುಡಿ, ಅಚ್ಚ ಖಾರದ ಪುಡಿ, ಓಂ ಕಾಳು, ಇಂಗು, ಉಪ್ಪು,      ಅಡುಗೆ ಸೋಡಾ ಎಲ್ಲವನ್ನೂ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.

*ನಂತರ ಸ್ವಲ್ಪ, ಸ್ವಲ್ಪವೇ ನೀರಿ ಹಾಕಿ ಹಿಟ್ಟನ್ನು ಗಟ್ಟಿಯಾಗಿ ಕಲಸಿಕೊಳ್ಳಬೇಕು.

*ಪಾಲಾಕ್ ಎಲೆಗಳನ್ನು ಚೆನ್ನಾಗಿ ತೊಳೆದುಕೊಂಡು ಒರೆಸಿಟ್ಟುಕೊಳ್ಳಬೇಕು.

*ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಲು ಬಿಡುಬೇಕು. ಎಣ್ಣೆ ಕಾದ ನಂತರ ಪಾಲಾಕ್ ಎಲೆಗಳನ್ನು ಹಿಟ್ಟಿನಲ್ಲಿ ಅದ್ದಿ ಕಾದ ಎಣ್ಣೆಗೆ ಬಿಟ್ಟು, ಕೆಂಪಗೆ ಕರಿದರೆ ರುಚಿಕರವಾದ ಕ್ರಿಸ್ಪಿ ಪಾಲಾಕ್ ಪಕೋಡಾ ರೆಡಿ. …