Breaking News

ದೇವೇಗೌಡರು ಅಡಿಗಲ್ಲಿಟ್ಟ ಬೋಗಿಬೀಲ್‌ ಬ್ರಿಡ್ಜ್‌ ಲೋಕಾರ್ಪಣೆ ..!

ಪ್ರಧಾನಿ ನರೇಂದ್ರ ಮೋದಿಜೀ ಇಂದು ಉದ್ಘಾಟನೆ.....

SHARE......LIKE......COMMENT......

ಅಸ್ಸಾಂ-ಅರುಣಾಚಲ ಪ್ರದೇಶ:

ದೇಶದಲ್ಲೇ ಅತಿ ಉದ್ದದ ಸೇತುವೆ ಎಂಬ ಹೆಗ್ಗಳಿಕೆ. 1997ರಲ್ಲಿ ಎಚ್‍.ಡಿ ದೇವೇಗೌಡರ ಕಾಲದಲ್ಲಿ ಶಂಕುಸ್ಥಾಪನೆಯಾಗಿದ್ದ ಸೇತುವೆ ಕಾಮಗಾರಿ ಆರಂಭವಾಗಿದ್ದು 2002ರಲ್ಲಿ ವಾಜಪೇಯಿ ಪ್ರಧಾನಿಯಾಗಿದ್ದ ಅವಧಿಯಲ್ಲಿ.21 ವರ್ಷಗಳ ಬಳಿಕ ಪೂರ್ಣಗೊಂಡ ಸೇತುವೆ ಇಂದು ಪ್ರಧಾನಿ ಮೋದಿ ಅವರಿಂದ ಲೋಕಾರ್ಪಣೆ ಮಾಡಲಿದ್ದಾರೆ

5960 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಸೇತುವೆಗೆ ಆರಂಭದ ಅಂದಾಜು ವೆಚ್ಚ ನಿಗದಿಯಾಗಿದ್ದ 3230 ಕೋಟಿ ರೂ. ಪ್ರಸ್ತುತ ಶೇ.85ರಷ್ಟು ಅಧಿಕ ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗಿದೆ

ಬ್ರಹ್ಮಪುತ್ರಾ ನದಿಗೆ ಅಡ್ಡವಾಗಿ ಕಟ್ಟಿದ 4.9 ಕಿ.ಮೀ ಉದ್ದದ ಈ ಸೇತುವೆಯ ಮೇಲಿನ ಅಂತಸ್ತಿನಲ್ಲಿ 3 ಪಥದ ರಸ್ತೆ ಮಾರ್ಗ, ಕೆಳ ಅಂತಸ್ತಿನಲ್ಲಿ 2 ಪಥದ ರೈಲು ಮಾರ್ಗವಿದೆ.ಬ್ರಹ್ಮಪುತ್ರಾ ನದಿಗೆ ಕಟ್ಟಿರುವ 4ನೇ ಸೇತುವೆ ಇದಾಗಿದ್ದು, ಅರುಣಾಚಲ ಪ್ರದೇಶದ ಭಾಗದಲ್ಲಿರುವ ಚೀನಾ ಗಡಿ ಭಾಗಕ್ಕೆ ಮಿಲಿಟರಿ ಅಗತ್ಯವನ್ನು ಪೂರೈಸಲೂ ಈ ಸೇತುವೆ ಅತಿ ಹೆಚ್ಚು ಪ್ರಯೋಜನಕಾರಿಯಾಗಲಿದೆ……..