ಬೆಂಗಳೂರು:
ನಾಳೆ ದೇಶಾದ್ಯಂತ ಮುಷ್ಕರದ ಬಿಸಿ ರಾಜ್ಯಕ್ಕೂ ತಟ್ಟಲಿದೆ. ಕೇಂದ್ರ ಜಂಟಿ ಕಾರ್ಮಿಕ ಸಮಿತಿ ನಾಳೆ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ಕೊಟ್ಟಿದೆ. 13 ಅಂಶಗಳ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹಲವು ಕಾರ್ಮಿಕ ಸಂಘಟನೆಗಳು ಬೀದಿಗಿಳಿಯಲಿವೆ. ಆಟೋ, ಕ್ಯಾಬ್ ಸೇರಿದಂತೆ ವಿವಿಧ ವಲಯಗಳ ಕಾರ್ಮಿಕರೂ ಮುಷ್ಕರಕ್ಕೆ ಸಾಥ್ ನೀಡಿದ್ದಾರೆ. ಹೀಗಾಗಿ ನಾಳೆ ಬೆಂಗಳೂರಿನಲ್ಲಿ ಆಟೋ, ಕ್ಯಾಬ್ ಸೇರಿದಂತೆ ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತವಾಗೋದು ಪಕ್ಕಾ.. ದೇಶದ ಆರ್ಥಿಕ ಸ್ಥಿತಿ, ಹೊಸ ಉದ್ಯೋಗ ಸೃಷ್ಟಿ. ಜಿಡಿಪಿ ಕುಸಿತ. ಸೇರಿದಂತೆ ಆರ್ಥಿಕ ಹಿಂಜರಿತದಿಂದ ಹಲವಾರು ಕಾರ್ಖಾನೆಗಳು ಮುಚ್ಚಿಹೋಗಿವೆ. ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ಅವಧಿಯಲ್ಲಿ 2ಲಕ್ಷ ಉದ್ಯೋಗ ಸೃಷ್ಟಿಸುವ ಆಶ್ವಾಸನೆ ಸುಳ್ಳಾಗಿದೆ. ಈ ಎಲ್ಲ ವಿಷಯಗಳನ್ನು ಮುಂದಿಟ್ಟುಕೊಂಡು ಭಾರತ್ ಬಂದ್ಗೆ ಕರೆ ನೀಡಲಾಗಿದೆ……