Breaking News

ಪ.ಬಂಗಾಳದಲ್ಲಿ ಬಿಜೆಪಿ ಮೇಲೆ ಗುಡುಗಿದ ಸಿಎಂ ಕುಮಾರಸ್ವಾಮಿ..!

ಬಿಜೆಪಿಯವರನ್ನ ಕಿತ್ತೊಗೆಯಬೇಕು...

SHARE......LIKE......COMMENT......

ಕೋಲ್ಕತ್ತಾ ಪ.ಬಂಗಾಳ:

ನರೇಂದ್ರ ಮೋದಿ ವಿರುದ್ಧ 2019ಕ್ಕೆ ವಿಪಕ್ಷಗಳ ದೊಡ್ಡ ದಂಡೇ ಒಗ್ಗೂಡಿದೆ. ಇವತ್ತು ಕೋಲ್ಕತ್ತಾದಲ್ಲಿ ಒಕ್ಕೂಟ ಭಾರತ ಸಮಾವೇಶ ನಡೆಯುತ್ತಿದೆ. ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ  ನೇತೃತ್ವದಲ್ಲಿ ನಡೆಯುತ್ತಿರೋ ಸಮಾವೇಶಕ್ಕೆ ಲಕ್ಷಾಂತರ ಕಾರ್ಯಕರ್ತರು ಭಾಗಿಯಾಗಿದ್ದಾರೆ. ಬೃಹತ್​ ಱಲಿಯಲ್ಲಿ ಕಾಂಗ್ರೆಸ್​ ಪ್ರತಿನಿಧಿಯಾಗಿ ಮಲ್ಲಿಕಾರ್ಜುನ ಖರ್ಗೆ, ಜೆಡಿಎಸ್​ ಪ್ರತಿನಿಧಿಗಳಾಗಿ ಮಾಜಿ ಪ್ರಧಾನಿ ದೇವೇಗೌಡರು, ಸಿಎಂ ಕುಮಾರಸ್ವಾಮಿ, ಬಿಎಸ್​ಪಿಯ ಸತೀಶ್ ಮಿಶ್ರಾ , ಟಿಡಿಪಿಯ ಚಂದ್ರಬಾಬು ನಾಯ್ಡು, ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್, ಬಿಜೆಪಿಯ ತಟಸ್ಥ ನಾಯಕರಾದ ಅರುಣ್​​ ಶೌರಿ, ಯಶವಂತ್​ ಸಿನ್ಹಾ, ಶತೃಘ್ನ ಸಿನ್ಹಾ ಸೇರಿದಂತೆ ನಮೋ ವಿರೋಧಿ ನಾಯಕರು ಭಾಗಿಯಾಗಿದ್ದಾರೆ.

ಇನ್ನು ಪಶ್ಚಿಮ ಬಂಗಾಳದಲ್ಲಿ ಸಿಎಂ ಕುಮಾರಸ್ವಾಮಿ ಮಾತನಾಡುತ್ತಾ ‘ಕರ್ನಾಟಕದಲ್ಲಿ ಬಿಜೆಪಿ ಕುದುರೆ ವ್ಯಾಪಾರ ಮಾಡುತ್ತಿದ್ದಾರೆ ,ಕೋಟಿ ಕೋಟಿ ಕೊಟ್ಟು ನಮ್ಮ ಶಾಸಕರನ್ನು ಖರೀದಿ ಮಾಡೋ ಯತ್ನ ನಡೆದಿದೆ ,ಪ್ರಜಾಪ್ರಭುತ್ವಕ್ಕೆ ಬಿಜೆಪಿ ಮಾರಕ, ಅದನ್ನು ಕಿತ್ತೊಗೆಯಲೇ ಬೇಕು’ ಎಂದು ಗುಡುಗಿದ್ದಾರೆ….