Breaking News

ಫುಟ್ಬಾಲ್ ಸೂಪರ್ ಸ್ಟಾರ್ ರೊನಾಲ್ಡೋ ವಿರುದ್ಧ ಅರೆಸ್ಟ್ ವಾರಂಟ್..?

ಮಾಡೆಲ್ ಮೇಲಿನ ಅತ್ಯಾಚಾರ ಪ್ರಕರಣ...

SHARE......LIKE......COMMENT......

ಕ್ರೀಡೆ:

ಫುಟ್ಬಾಲ್ ಸೂಪರ್ ಸ್ಟಾರ್ ರೊನಾಲ್ಡೋ ವಿರುದ್ಧ ಅರೆಸ್ಟ್ ವಾರಂಟ್ ಜಾರಿ ಮಾಡಲಾಗಿದೆ ಮಾಡೆಲ್ ಮೇಲಿನ ಅತ್ಯಾಚಾರ ಪ್ರಕರಣಕ್ಕ ಸಂಬಂಧಿಸಿದಂತೆ ಎಂದು ಹೇಳಲಾಗುತ್ತಿದೆ.

ಇದರ ಬಗ್ಗೆ ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆ ವರದಿ ಮಾಡಿದ್ದು, 2009 ರಲ್ಲಿ ನಡೆದ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಕ್ರಿಸ್ಟಿಯಾನೊ ರೊನಾಲ್ಡೊ ವಿರುದ್ಧ ಅರೆಸ್ಟ್​ ವಾರೆಂಟ್​ ಜಾರಿ ಮಾಡಲಾಗಿದೆ ಎಂದು ಹೇಳಿದೆ. ಅಮೆರಿಕದ ರೂಪದರ್ಶಿ ಕ್ಯಾಥರಿನ್ ಮಯೊರ್ಗಾ ಅವರ ಮೇಲೆ ರೊನಾಲ್ಜೋ ಅತ್ಯಾಚಾರ ಮಾಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ರೊನಾಲ್ಡೋ ಅವರ ಡಿಎನ್ ಎ ಸಂಗ್ರಹಕ್ಕಾಗಿ ಅವರ ವಿರುದ್ಧ ಲಾಸ್ ವೇಗಾಸ್ ಪೊಲೀಸರ ವಾರೆಂಟ್ ಜಾರಿ ಮಾಡಿದ್ದಾರೆ ಎನ್ನಲಾಗಿದೆ.

2009 ರಲ್ಲಿ ಹೊಟೇಲ್​ ಒಂದರಲ್ಲಿ ಕ್ರಿಸ್ಟಿಯಾನೊ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ. ಸುದ್ದಿಯನ್ನು ಬಹಿರಂಗಪಡಿಸದಂತೆ 2.7 ಕೋಟಿ ರೂ ಹಣದ ಆಮಿಷ ಒಡ್ಡಿದ್ದರು ಎಂದು ಕ್ಯಾಥರಿನ್ ಕಳೆದ ಅಕ್ಟೋಬರ್​ನಲ್ಲಿ ಗಂಭೀರ ಆರೋಪ ಮಾಡಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ ಕೊಂಡಿದ್ದ ಲಾಸ್ ವೇಗಾಸ್ ಪೊಲೀಸರು, ರೊನಾಲ್ಡೋಗೆ ಡಿಎನ್​ಎ ಸ್ಯಾಂಪಲ್ ನೀಡುವಂತೆ ತಿಳಿಸಿದ್ದರು. ವಿಷಯವನ್ನು ಗಂಭೀರವಾಗಿ ಪರಿಗಣಿಸದ ರೊನಾಲ್ಡೊ ಪೊಲೀಸರಿಗೆ ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ.ಆಗಾಗಿ ರೊನಾಲ್ಡೊ ವಿರುದ್ಧ ಲಾಸ್​ ವೇಗಾಸ್ ಪೊಲೀಸರು ವಾರೆಂಟ್​ ಜಾರಿ ಮಾಡಿದ್ದಾರೆ…