ಹಾಲಿವುಡ್:
ಇಡೀ ವಿಶ್ವದಲ್ಲಿಯೇ ಅತ್ಯಂತ ದುಬಾರಿ ನಟ ಯಾರು ಅಂತ ನೀವು ಯೋಚನೆ ಮಾಡ್ತಿದ್ರೆ, ಅಂದ್ಹಾಗೆ, .. ಇಡೀ ವಿಶ್ವದಲ್ಲಿಯೇ ಅತ್ಯಂತ ದುಬಾರಿ ‘ನಟ’ ಅಂದ್ರೆ ಇವರೇ…. ಜಾರ್ಜ್ ಕ್ಲೂನಿ. ಅಮೇರಿಕಾದ ಪ್ರಖ್ಯಾತ ನಟ, ನಿರ್ದೇಶಕ, ನಿರ್ಮಾಪಕ ಜಾರ್ಜ್ ಕ್ಲೂನಿ ರವರ ವಾರ್ಷಿಕ ಆದಾಯ 239 ಮಿಲಿಯನ್ ಡಾಲರ್. ಫೋರ್ಬ್ಸ್ ಬಿಡುಗಡೆ ಮಾಡಿರುವ ಟಾಪ್ 100 ಅತಿ ಹೆಚ್ಚು ಸಂಭಾವನೆ ಪಡೆಯುವ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಜಾರ್ಜ್ ಕ್ಲೂನಿ ಎರಡನೇ ಸ್ಥಾನದಲ್ಲಿದ್ದಾರೆ. ನಟರ ಪೈಕಿ ಇವರೇ ಮೊದಲಿಗರು…..
ದ್ವೇನ್ ಜಾನ್ಸನ್ ‘ದಿ ರಾಕ್’ ಎಂದೇ ಖ್ಯಾತಿ ಪಡೆದಿರುವ ರೆಸ್ಲಿಂಗ್ ಲೆಜೆಂಡ್, ನಟ, ನಿರ್ಮಾಪಕ ದ್ವೇನ್ ಜಾನ್ಸನ್ ಫೋರ್ಬ್ಸ್ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದಿದ್ದಾರೆ. 46 ವರ್ಷ ವಯಸ್ಸಿನ ದ್ವೇನ್ ಜಾನ್ಸನ್ ವಾರ್ಷಿಕ ಆದಾಯ 124 ಮಿಲಿಯನ್ ಡಾಲರ್.
ರಾಬರ್ಟ್ ಡೌನಿ ಅಮೇರಿಕಾದ ನಟ ಹಾಗೂ ಗಾಯಕ ರಾಬರ್ಟ್ ಡೌನಿ ಫೋರ್ಬ್ಸ್ ಪಟ್ಟಿಯಲ್ಲಿ ಇಪ್ಪತ್ತನೇ ಸ್ಥಾನ ಪಡೆದಿದ್ದಾರೆ. 53 ವರ್ಷ ವಯಸ್ಸಿನ ರಾಬರ್ಟ್ ವಾರ್ಷಿಕ ಆದಾಯ 81 ಮಿಲಿಯನ್ ಡಾಲರ್.
ಜಾಕಿ ಚಾನ್ ಆಸ್ಟ್ರೇಲಿಯಾದ ನಟ ಕ್ರಿಸ್ ಹೆಮ್ಸ್ ವರ್ಥ್ 31ನೇ ಸ್ಥಾನದಲ್ಲಿದ್ದರೆ, 45.5 ಮಿಲಿಯನ್ ಡಾಲರ್ ವಾರ್ಷಿಕ ಆದಾಯ ಹೊಂದಿರುವ ಪ್ರಖ್ಯಾತ ನಟ ಜಾಕಿ ಚಾನ್ 59ನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ವಿಲ್ ಸ್ಮಿತ್ ಹಾಗೂ ಆಡಂ ಸ್ಯಾಂಡ್ಲರ್ ಕ್ರಮವಾಗಿ 71 ಹಾಗೂ 78ನೇ ಸ್ಥಾನದಲ್ಲಿದ್ದಾರೆ.
ಭಾರತದ ಇಬ್ಬರು ನಟರು.! 40.5 ಮಿಲಿಯನ್ ಡಾಲರ್ ಆದಾಯದೊಂದಿಗೆ ಅಕ್ಷಯ್ ಕುಮಾರ್ 76ನೇ ಸ್ಥಾನದಲ್ಲಿ ಇದ್ದರೆ, ಸಲ್ಮಾನ್ ಖಾನ್ 82ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.ಫೋರ್ಬ್ಸ್ ಪಟ್ಟಿಯಲ್ಲಿ ನಿರಂತರವಾಗಿ ಸ್ಥಾನ ಗಿಟ್ಟಿಸಿಕೊಳ್ಳುತ್ತಿದ್ದ ಶಾರುಖ್ ಖಾನ್ ಈ ಬಾರಿ ಮಿಸ್ ಆಗಿದ್ದಾರೆ. ಇನ್ನೂ ಅಮಿತಾಬ್ ಬಚ್ಚನ್, ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಅಂತಹ ತಾರೆಯರ ಹೆಸರು ಕೂಡ ಈ ವರ್ಷದ ಫೋರ್ಬ್ಸ್ ಪಟ್ಟಿಯಲ್ಲಿ ಪತ್ತೆ ಇಲ್ಲ……