ಮಂಗಳೂರು:
ಮಂಗಳೂರು ಬಾಂಬರ್ ಆರೋಪಿ ಆದಿತ್ಯರಾವ್ನ ರಾತ್ರಿ ಇಡೀ ವಿಚಾರಣೆ ಮಾಡಿ ಸುದ್ದಿಗೋಷ್ಠಿ ನಡೆಸಿದ ಮಂಗಳೂರು ಕಮಿಷನರ್ ಡಾ.ಹರ್ಷ ಸಾಕಷ್ಟು ಮಾಹಿತಿ ಬಹಿರಂಗ ಪಡೆಸಿದ್ದಾರೆ, ಆರೋಪಿ ಆದಿತ್ಯ ರಾವ್ ಸಾಕಷ್ಟು ಕಡೆ ಕೆಲಸ ಮಾಡಿದ್ದ. ಎಲ್ಲಿಯೂ ನೆಲೆ ನಿಲ್ಲದೇ ಪದೇ ಪದೇ ಕೆಲಸ ಬದಲಾವಣೆ ಮಾಡುತ್ತಿದ್ದ. ಪ್ರತಿಷ್ಠಿತ ಬ್ಯಾಂಕಿಂಗ್, ವಿಮೆ ಕಂಪನಿಗಳಲ್ಲೂ ಆದಿತ್ಯರಾವ್ ಕೆಲಸ ಮಾಡಿದ್ದ. ಬೆಂಗಳೂರಿನ ಹಲವು ಸಂಸ್ಥೆಗಳಲ್ಲೂ ಕೆಲಸ ಮಾಡಿದ್ದಾನೆ. ಎಂಜಿನಿಯರಿಂಗ್, ಎಂಬಿಎ ಮಾಡಿದ್ದರೂ ಆತನಿಗೆ ಸೂಕ್ತ ಹುದ್ದೆ ಸಿಕ್ಕಿರಲಿಲ್ಲ. ಆತನ ಮನಸ್ಸು ಚಂಚಲವಾಗಿತ್ತು, ಸಣ್ಣದಕ್ಕೂ ಆತ ಬೇಸರ ಮಾಡಿಕೊಳ್ತಿದ್ದ ಎಂದು ಹರ್ಷ ಹೇಳಿದ್ದಾರೆ……