ಬೆಂಗಳೂರು:
ಕಲಬುರಗಿಯಲ್ಲಿ ಲೋಕಸಭಾ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಅಜಯ್ ಸಿಂಗ್ ಕೈ ಕೊಡ್ತಾರಾ ಅನ್ನೋ ಪ್ರಶ್ನೆ ಉದ್ಭವಿಸಿದೆ. ತಮ್ಮ ತಂದೆ, ಮಾಜಿ ಸಿಎಂ ಧರ್ಮಸಿಂಗ್ ಜಿಗರಿ ದೋಸ್ತ್ ಖರ್ಗೆ ವಿರುದ್ಧ ಜೇವರ್ಗಿ ಶಾಸಕ ಅಜಯ್ ಸಿಂಗ್ ಸಿಡಿದೆದ್ದಿದ್ದಾರಾ ಅನ್ನೋ ಅನುಮಾನಗಳು ಮೂಡಿವೆ.
ಇದಕ್ಕೆ ಪುಷ್ಠಿ ನೀಡುವಂತೆ ಫೇಸ್ಬುಕ್ನಲ್ಲಿ ಉಮೇಶ್ ಜಾಧವ್ರನ್ನು ಬೆಂಬಲಿಸಿ ಅಜಯ್ ಸಿಂಗ್ ಕಮೆಂಟ್ ಮಾಡಿದ್ದಾರೆ. ‘ನನ್ನ ಬಳಿಯೂ ಅಸ್ತ್ರಗಳಿವೆ.. ಟೈಮ್ ಬಂದಾಗ ಪ್ರಯೋಗಿಸುತ್ತೇನೆ’ ಅಂತಾ ಉಮೇಶ್ ಜಾಧವ್ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ರು. ಜಾಧವ್ ಪೋಸ್ಟ್ಗೆ ಕಮೆಂಟ್ ಮಾಡಿರೋ ಅಜಯ್ ಸಿಂಗ್, ‘ಗ್ರೇಟ್ ಜಾಧವ್ ಜೀ’ ಅಂತಾ ಹೇಳಿದ್ದಾರೆ. ಈ ಕಮೆಂಟ್ ಸಧ್ಯ ಕಾಂಗ್ರೆಸ್ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಅಜಯ್ ಸಿಂಗ್ ಖರ್ಗೆಗೆ ಕೈಕೊಟ್ಟು ಜಾಧವ್ ಬೆಂಬಲಕ್ಕೆ ನಿಲ್ತಾರಾ ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ………..
ಈ ಮಧ್ಯೆ ಕಲಬುರ್ಗಿಯಲ್ಲಿ ಉಮೇಶ್ ಜಾಧವ್ ಹವಾ ಎದ್ದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಡಾ.ಉಮೇಶ್ ಜಾಧವ್ ಪರ ಹೆಚ್ಚಿನ ಒಲವು ವ್ಯಕ್ತವಾಗ್ತಿದೆ. ಮಲ್ಲಿಕಾರ್ಜುನ ಖರ್ಗೆ ಹಾಗೂ ಡಾ.ಉಮೇಶ್ ಜಾಧವ್ ಬೆಂಬಲಿಗರಿಂದ ಫೇಸ್‌ಬುಕ್ ಪೋಲ್ನಲ್ಲಿ ಜಾಧವ್ ಪರ ವೋಟ್ ಬೀಳ್ತಿವೆ. ಅಷ್ಟೆ ಅಲ್ಲ ಕಲಬುರಗಿ ಜಿಲ್ಲಾ ಕಾಂಗ್ರೆಸ್ ಹೆಸರಿನ ಫೇಸ್‌ಬುಕ್ ಪೇಜ್‌ನಲ್ಲಿ ಮಾಡಿರುವ ಪೋಲ್‌ನಲ್ಲೂ ಜಾಧವ್ ಪರವೇ ಒಲವು ವ್ಯಕ್ತವಾಗಿದೆ……