ಮೈಸೂರು:
ಮೈಸೂರು ಲೋಕಸಭಾ ಕ್ಷೇತ್ರ ಕಾಂಗ್ರೆಸ್-ಜೆಡಿಎಸ್ ದೋಸ್ತಿಗೆ ಕಂಟಕವಾಗೋ ಲಕ್ಷಣ ಕಾಣ್ತಿದೆ. ಮೈಸೂರು ಬೇಕೇ ಬೇಕೆಂದು ದೇವೇಗೌಡರು ಪಟ್ಟು ಹಿಡಿದಿದ್ದಾರೆ. ಮತ್ತೊಂದೆಡೆ ಮೈಸೂರು ಕೊಟ್ಟರೆ ಕಾಂಗ್ರೆಸ್ ಸರ್ವನಾಶ ಎನ್ನುತ್ತಿದ್ದಾರೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ. ಹೀಗಾಗಿ ಮೈಸೂರು ಕ್ಷೇತ್ರ ಬಿಟ್ಟುಕೊಡುವಂತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮುಂದೆ ಜೆಡಿಎಸ್ ಸಮನ್ವಯ ಸಮಿತಿ ಸದಸ್ಯ ಡ್ಯಾನಿಷ್ ಅಲಿ ಪಟ್ಟು ಹಿಡಿದಿದ್ದಾರೆ.
12 ಕ್ಷೇತ್ರದಿಂದ 10 ಕ್ಷೇತ್ರಕ್ಕೆ ನಾವು ಸಮಾಧಾನ ಪಟ್ಟುಕೊಂಡಿದ್ದೇವೆ. 8 ಕ್ಷೇತ್ರಗಳನ್ನು ಕೊಟ್ಟರೂ ಒಪ್ಪಿಕೊಳ್ಳುತ್ತೇವೆ ಆದ್ರೆ ಮೈಸೂರು ಬಿಟ್ಟುಕೊಡಿ ಎಂದು ಡ್ಯಾನಿಶ್ ಅಲಿ ಎಐಸಿಸಿ ಅಧ್ಯಕ್ಷರ ಮುಂದೆ ಆಗ್ರಹಿಸಿದ್ದಾರೆ. ಹೀಗಾಗಿ ಮೈಸೂರು ಕ್ಷೇತ್ರ ಜೆಡಿಎಸ್ಗೆ ಸಿಗದೇ ಹೋದ್ರೆ ಮೈತ್ರಿ ಖತಂ ಆಗೋ ಲಕ್ಷಣ ಕಾಣುತ್ತಿವೆ…….