ಬೆಂಗಳೂರು:
ಸಾಮಾನ್ಯವಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ನಟರಿಗೆ ಹುಟ್ಟುಹಬ್ಬದ ದಿನ ಮಾತ್ರವಲ್ಲದೇ ಯಾವಾಗಲೂ ಉಡುಗೊರೆಯನ್ನು ನೀಡುತ್ತಿರುತ್ತಾರೆ. ಇದೀಗ ಅಭಿಮಾನಿಯೊಬ್ಬರು ರಾಕಿಂಗ್ ಸ್ಟಾರ್ ಯಶ್ ಅವರಿಗೆ ಮಗಳು ಐರಾ ಚಿತ್ರವನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಭಿಮಾನಿ ನಟ ಯಶ್‍ಗೆ ಉಡುಗೊರೆ ನೀಡುತ್ತಿರುವ ಫೋಟೋವನ್ನು ಅಭಿಮಾನಿಗಳು ತಮ್ಮ ಫ್ಯಾನ್ಸ್ ಪೇಜ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ “ನಮ್ಮ ರಾಕಿಂಗ್ ದಂಪತಿಯ ಮುದ್ದಿನ ಮಗಳು ಐರಾ ಅವರ ಸುಂದರ ಕಲಾಕೃತಿಯೊಂದಿಗೆ ನಮ್ಮ ಯಶ್ ಅವರನ್ನು ಭೇಟಿಯಾದ ಅಭಿಮಾನಿ” ಎಂದು ಬರೆದುಕೊಂಡಿದ್ದಾರೆ…..