ಮುಂಬೈ:
ಭಾರತೀಯ ಬ್ಯಾಂಕ್ ಗಳಲ್ಲಿ ಒಂಭತ್ತು ಸಾವಿರ ಕೋಟಿ ರುಪಾಯಿ ಸಾಲ ಮಾಡಿ ದೇಶ ಬಿಟ್ಟು ಪಲಾಯನ ಮಾಡಿರುವ ಮದ್ಯದ ದೊರೆ, ಉದ್ಯಮಿ ವಿಜಯ್ ಮಲ್ಯರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಪಿಎಂಎಲ್ಎ ಕೋರ್ಟ್ ಘೋಷಣೆ ಮಾಡಿದೆ.ಇದರಿಂದಾಗಿ ಮಲ್ಯ ಅವರ ಎಲ್ಲ ಆಸ್ತಿಗಳನ್ನೂ ಮುಟ್ಟುಗೋಲು ಹಾಕಿಕೊಳ್ಳಲು ಇ.ಡಿಗೆ ಅವಕಾಶ ದೊರೆತಿದೆ.
ಕೇಂದ್ರ ಸರ್ಕಾರಕ್ಕೆ ಹಾಗೂ ಬ್ಯಾಂಕ್ ಗಳಿಗೆ ವಿಜಯ್ ಮಲ್ಯ ಆಸ್ತಿ ವಶಪಡಿಸಿಕೊಳ್ಳಲು ಇದ್ದ ಅಡ್ಡಿ ಆತಂಕಗಳೆಲ್ಲಾ ಇದೀಗ ಕೋರ್ಟ್ ನ ಈ ತೀರ್ಪಿನಿಂದಾಗಿ ನಿವಾರಣೆ ಆದಂತಾಗಿದೆ. ಈ ಸಂಬಂಧ ಇಡಿ ಮತ್ತು ಸಿಬಿಐ ವಿಶೇಷ ಪಿಎಂಎಲ್ಎ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನೂತನ ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆಯಡಿ ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸಲ್ಪಟ್ಟ ಮೊದಲ ವ್ಯಕ್ತಿ ವಿಜಯ್ ಮಲ್ಯ ಆಗಿದ್ದಾರೆ……