Breaking News

ವಿಶ್ವದ ಶ್ರೀಮಂತ ನಟರಲ್ಲಿ WWE ಲೆಜೆಂಡ್..!

ಫೋರ್ಬ್ಸ್ ಪಟ್ಟಿಯಲ್ಲಿ ರಾಕ್ ಗೆ 2ನೇ ಸ್ಥಾನ..

SHARE......LIKE......COMMENT......

ಹಾಲಿವುಡ್:

ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 100 ಸೆಲೆಬ್ರಿಟಿಗಳ ಪಟ್ಟಿಯನ್ನ ಫೋರ್ಬ್ಸ್ ನಿಯತಕಾಲಿಕೆ ಪ್ರಕಟಿಸಿದ್ದು, ರೆಸ್ಲಿಂಗ್ ಲೆಜೆಂಡ್ ಡ್ವೇನ್ ಜಾನ್ಸನ್ (ದಿ ರಾಕ್) ಐದನೇ ಸ್ಥಾನ ಪಡೆದುಕೊಂಡಿದ್ದಾರೆ. ಆದ್ರೆ, ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪೈಕಿ ‘ದಿ ರಾಕ್’ ಎರಡನೇ ಸ್ಥಾನದಲ್ಲಿದ್ದಾರೆ. 124 ಮಿಲಿಯನ್ ಡಾಲರ್ ಗಳಿಸುವ ಮೂಲಕ ಜಗತ್ತಿನಾದ್ಯಂತ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಅಮೇರಿಕ ನಟ ಜಾರ್ಜ್ ಕೂನಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

WWEನೊಂದಿಗೆ ಹಾಲಿವುಡ್ ನಲ್ಲಿ ಸಿನಿಮಾಗಳಲ್ಲಿ ನಟಿಸುವ ಮೂಲಕ ಮೋಸ್ಟ್ ಎಂಟರ್ ಟೈನರ್ ಆಗಿರುವ (ರಾಕ್ ) ಡ್ವೇನ್ ಜಾನ್ಸನ್ ವರ್ಷದ ಅತಿ ಶ್ರೀಮಂತ ತಾರೆಯಲ್ಲಿ ಪ್ರಮುಖರು ಎಂದು ಫೋರ್ಬ್ಸ್ ವರದಿ ಮಾಡಿದೆ.

ಇನ್ಸ್ಟಾಗ್ರಾಮ್ ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಡ್ವೇನ್ ಜಾನ್ಸನ್ ”ನಾನು ತುಂಬಾ ಕಠಿಣ ಶ್ರಮದಿಂದ ಕೆಲಸ ಮಾಡುತ್ತಿದ್ದೇನೆ, ಆದ್ರೆ, ಫೋರ್ಬ್ಸ್ ಇತಿಹಾಸದಲ್ಲಿ ನಾನು ಅತಿ ಹೆಚ್ಚು ಸಂಭಾವನೆ ಪಡೆಯುವ ನಟನಾಗುತ್ತೇನೆ ಎಂದು ಯಾವತ್ತೂ ನಿರೀಕ್ಷಿಸಲಿಲ್ಲ. ತುಂಬಾ ಖುಷಿ ಆಗ್ತಿದೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ…….