Breaking News

ವೈದ್ಯರು,ನರ್ಸ್ ಗಳಿಗೆ ಮನೆ ಖಾಲಿ ಮಾಡುವಂತೆ ಒತ್ತಾಯ..!

ಮನೆ ಮಾಲೀಕರ ವಿರುದ್ದ ಕಠಿಣ ಕ್ರಮ....

SHARE......LIKE......COMMENT......

ಬೆಂಗಳೂರು:

ಮಹಾಮಾರಿ ಕೊರೋನಾ ವೈರಸ್‌ ಹರಡುತ್ತಿರುವ ಹಿನ್ನಲೆಯಲ್ಲಿ ವೈದ್ಯರು,ನರ್ಸ್,ಪ್ಯಾರಾ ಮೆಡಿಕಲ್ ಸಿಬ್ಬಂದಿಗಳಿಗೆ ಮನೆಗಳನ್ನ ಖಾಲಿ ಮಾಡುವಂತೆ ಒತ್ತಾಯ ಮಾಡುತ್ತಿರುವ ಮನೆ ಮಾಲೀಕ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ, ಬಿಬಿಎಂಪಿ ಕಮಿಷನರ್,ಎಲ್ಲಾ ಜಿಲ್ಲಾ ಎಸಿಗಳಿಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ನಿಮ್ಮಿಂದ ನಮಗೂ ಕರೋನಾ ಹರಡತ್ತೆ ಫಸ್ಟ್ ನೀವು ಮನೆ ಖಾಲಿ ಮಾಡಿ ಎಂದು ಮನೆ ಮಾಲೀಕರು ಬಾಡಿದಾರರಿಗೆ ಒತ್ತಾಯ ಹಾಕಿದ್ದರು. ಇದರಿಂದ ಬೇಸತ್ತ ವೈದ್ಯರು, ನರ್ಸ್ ಗಳಿಂದ ಸರ್ಕಾರಕ್ಕೆ ದೂರು ದಾಖಲಿಸಿದ್ದರು. ಈ ದೂರಿನ ಮೇರೆಗೆ ಮನೆ ಖಾಲಿ ಮಾಡುವಂತೆ ಒತ್ತಾಯ ಮಾಡುತ್ತಿರುವ ಮನೆ ಮಾಲೀಕರ ವಿರುದ್ದ ಕಠಿಣ ಕ್ರಮಕ್ಕೆ ಆರೊಗ್ಯ ಇಲಾಖೆ ಮುಂದಾಗಿದೆ……