Breaking News

ಶೃಂಗೇರಿ ಮಠಕ್ಕೆ ಲಲಿತಾ ಸಹಸ್ರನಾಮದ ಸೀರೆ ಕೊಡುಗೆ..!

ಪದ್ಮಾ ಮಂಜುನಾಥ್ ಕೈಯಲ್ಲಿ ಅರಳಿದ ಕಲೆ....

SHARE......LIKE......COMMENT......

ಶೃಂಗೇರಿ:

ಶ್ರೀ ಶಾರದಾ ಪೀಠದಲ್ಲಿ ಲಲಿತಾ ಸಹಸ್ರನಾಮವಿರುವ ಹಸಿರು ಕಂಚಿ ಸೀರೆಯನ್ನು ನರಸಿಂಹವನದ ಗುರುನಿವಾಸದಲ್ಲಿ ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಸಾನ್ನಿಧ್ಯದಲ್ಲಿ ಅನಾವರಣಗೊಳಿಸಲಾಯಿತು.

ಬೆಂಗಳೂರಿನ ಪದ್ಮಾ ಮಂಜುನಾಥ್ ಕಳೆದ ಮೂರು ವರ್ಷಗಳ ಸತತ ಪರಿಶ್ರಮದಿಂದ 16 ಅಡಿ ಉದ್ದ ಹಾಗೂ ನಾಲ್ಕು ಅಡಿ ಅಗಲದ ಸೀರೆಯಲ್ಲಿ ಲಲಿತಾ ಸಹಸ್ರನಾಮ ರಚಿಸಿದ್ದಾರೆ. ಈ ಸೀರೆಯನ್ನು ಶಾರದಾಂಬೆಗೆ ಪದ್ಮಾ ಮಂಜುನಾಥ್ ದಂಪತಿ ಸಮರ್ಪಿಸಿದರು. ಉಭಯ ಶ್ರೀಗಳ ಸೂಚನೆಯಂತೆ ಅದನ್ನು ಶಾಶ್ವತವಾಗಿ ಗುರುಭವನದಲ್ಲಿ ಇಡಲಾಗಿದೆ.

ಪದ್ಮಾ ಮಂಜುನಾಥ್ ಅವರ ಸಾಧನೆ ತಾಯಿ ಶಾರದೆಯ ಅನುಗ್ರಹದಿಂದ ಪೂರ್ಣಗೊಂಡಿದೆ. ಏಕಾಗ್ರತೆ, ಶ್ರದ್ಧಾಭಕ್ತಿಯಿಂದ ಕುಸುರಿ ಕಾರ್ಯವನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಈ ಯೋಜನೆ ನಮಗೆ ತುಂಬ ಸಂತೋಷ ಉಂಟುಮಾಡಿದೆ ಎಂದು ಶ್ರೀಗಳು ಸಂತಸ ವ್ಯಕ್ತಪಡಿಸಿದರು.

ಬಹುಮುಖ ಪ್ರತಿಭೆಯ ಪದ್ಮಾ ಮಂಜುನಾಥ್ ಕಲೆಯ ಎಲ್ಲ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತರಕಾರಿ ಕೆತ್ತನೆ,ಬೊಂಬೆ ತಯಾರಿಕೆ, ಹಸೆ, ಚಿತ್ತಾರ, ಪೇಂಟಿಂಗ್, ಕೊಬ್ಬರಿ ಕೆತ್ತನೆ, ಸ್ವೆಟರ್ ನೇಯ್ಗೆ, ಮದುವೆ ಹಾಗೂ ಶುಭ ಸಮಾರಂಭಗಳಿಗೆ ಅಲಂಕಾರಿಕ ವಸ್ತುಗಳ ತಯಾರಿಕೆ ಹೀಗೆ ವಿವಿಧ ಪ್ರಕಾರಗಳಲ್ಲಿ ನೈಪುಣ್ಯತೆ ಸಾಧಿಸಿದ್ದಾರೆ…….