ನವದೆಹಲಿ:
ಸಾಮಾಜಿಕ ಜಾಲತಾಣದಲ್ಲಿ ವಾಟ್ಸ್ಆ್ಯಪ್ ಕಂಪನಿ ತಿಳಿಸಿರುವ ಪ್ರಕಾರ ಹೊಸ ವರ್ಷದಿಂದ ತನ್ನ ಕೆಲ ಗ್ರಾಹಕರಿಗೆ ಶಾಕ್ ನೀಡಲು ಮುಂದಾಗಿದ್ದು, ಈ ಎಲ್ಲ ಮೊಬೈಲ್ಗಳಲ್ಲಿ ವಾಟ್ಸ್ಆ್ಯಪ್ ವರ್ಕ್ ಆಗಲ್ಲ ಎಂಬ ಮಾಹಿತಿ ಹೊರಹಾಕಿದೆ.
ಆಂಡ್ರಾಯ್ಡ್ ಆವೃತ್ತಿಯ 2.3.3 ಕ್ಕಿಂತಲೂ ಹಳೆ ಮೊಬೈಲ್, ವಿಂಡೋಸ್ ಪೋನ್ 7, ಐಫೋನ್ 3 ಜಿಎಸ್ / ಐಒಎಸ್ 6, ನೋಕಿಯಾ ಸಿಂಬಿಯಾನ್ ಎಸ್ 60 ಮೊಬೈಲ್ಗಳಲ್ಲಿ ಅದು ತನ್ನ ಸೇವೆ ಸ್ಥಗಿತಗೊಳಿಸಲಿದೆ.
ಈಗಾಗಲೇ ಕಂಪನಿ ತನ್ನ ಬ್ಲಾಗ್ನಲ್ಲಿ ಬರೆದುಕೊಂಡು ಗ್ರಾಹಕರಿಗೆ ಮಾಹಿತಿ ಸಹ ನೀಡಿತ್ತು. ಈ ಮೊಬೈಲ್ ಹೊಂದಿರುವ ಗ್ರಾಹಕರು ಹೊಸ ಆಪರೇಟಿಂಗ್ ಸಿಸ್ಟೀಮ್ ಅಪ್ಗ್ರೇಡ್ ಮಾಡಿಕೊಳ್ಳಲು ಸಹ ತಿಳಿಸಿತ್ತು. ಇನ್ನು ಆಂಡ್ರಾಯ್ಡ್ ಓಎಸ್ ಓಎಸ್ 4.0+,ಐಒಎಸ್ 8+ ಚಾಲನೆಯಲ್ಲಿರುವ ಐಫೋನ್,ವಿಂಡೋಸ್ ಫೋನ್ 8.1+,ಜಿಯೋಫೋನ್ ಹಾಗೂ ಜಿಯೋಫೋನ್ 2ಗಳಲ್ಲಿ ವಾಟ್ಸ್ಆ್ಯಪ್ ಸೇವೆ ಸಿಗಲಿದೆ ಎಂದು ತಿಳಿದು ಬಂದಿದೆ……