Breaking News

ರಾಜ್ಯದಲ್ಲಿ ಇಂದು 453 ಮಂದಿಗೆ ಕೊರೋನಾ ಪಾಸಿಟಿವ್ ಕೇಸ್..!

ಬೆಂಗಳೂರಲ್ಲಿ ಇಂದು ಒಂದೇ ದಿನ 196 ಕೇಸ್.....

SHARE......LIKE......COMMENT......

ಬೆಂಗಳೂರು:

ರಾಜ್ಯದಲ್ಲಿ ಜೂನ್ 20ರ ಸಂಜೆ 5 ಗಂಟೆಯಿಂದ ಜೂನ್ 21ರ ಸಂಜೆ 5 ಗಂಟೆವರೆಗೆ 453 ಹೊಸ ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ, ಇಂದು ಐದು ಮಂದಿ ಮೃತಪಟ್ಟಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 9150ಕ್ಕೆ ಏರಿಕೆಯಾಗಿದೆ, ಇದುವರೆಗೂ 137 ಮಂದಿಯ ಸಾವಾಗಿದೆ.

ಇಂದು ಬೆಂಗಳೂರು ನಗರ 196, ಬಳ್ಳಾರಿ 40, ಕಲಬುರಗಿ 39, ವಿಜಯಪುರ 39, ಮೈಸೂರು 18, ಗದಗ 18, ಧಾರವಾಡ 15, ಬಾಗಲಕೋಟೆ 14, ಬೀದರ್ 13, ದಾವಣಗೆರೆ 8, ಉತ್ತರ ಕನ್ನಡ 8, ಕೋಲಾರ 8, ದಕ್ಷಿಣ ಕನ್ನಡ 8, ಮಂಡ್ಯ 5, ಹಾಸನ 5, ತುಮಕೂರು 4, ಯಾದಗಿರಿ 3, ಚಿಕ್ಕಬಳ್ಳಾಪುರ 3, ಹಾವೇರಿ 3, ರಾಯಚೂರು 2, ಶಿವಮೊಗ್ಗ 2, ರಾಮನಗರ 2 ಮತ್ತು ಚಿಕ್ಕಮಗಳೂರಿನಲ್ಲಿ 1 ಕೊರೊನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ….