Breaking News

ಡಿಸೆಂಬರ್​​​ 22 ಹಾಗೂ 27ರಂದು ಗ್ರಾಮ ಪಂಚಾಯ್ತಿ ಎಲೆಕ್ಷನ್..!

ಡಿಸೆಂಬರ್​​ 30ರಂದು ​​​ಎಲೆಕ್ಷನ್​​​​ ಫಲಿತಾಂಶ....

SHARE......LIKE......COMMENT......

ಬೆಂಗಳೂರು:

ರಾಜ್ಯ ಚುನಾವಣಾ ಆಯೋಗ ಇಂದು ಗ್ರಾಮ ಪಂಚಾಯ್ತಿ ಎಲೆಕ್ಷನ್​​​ ದಿನಾಂಕವನ್ನ ಅಧಿಕೃತ ಘೋಷಣೆ ಮಾಡಿದೆ. ಎರಡು ಹಂತದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ನಡೆಯಲಿದ್ದು, ಮೊದಲ ಹಂತದಲ್ಲಿ 113 ತಾಲೂಕಿನ 2930 ಪಂಚಾಯ್ತಿಗೆ ಎಲೆಕ್ಷನ್​​, ಎರಡನೇ ಹಂತದಲ್ಲಿ 113 ತಾಲೂಕಿನ 2832 ಪಂಚಾಯ್ತಿಗೆ ಎಲೆಕ್ಷನ್​​​ ನಡೆಯಲಿದೆ. ಈ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಒಟ್ಟು 95121 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಡಿಸೆಂಬರ್​​​ 22ರಂದು ಮೊದಲ ಹಂತಕ್ಕೆ ಚುನಾವಣೆ ಹಾಗೂ ಡಿಸೆಂಬರ್​​​ 27ಕ್ಕೆ ಎರಡನೇ ಹಂತದ ಎಲೆಕ್ಷನ್​​​​ ನಡೆಯಲಿದೆ.

ಮೊದಲ ಹಂತದ ಗ್ರಾಮ ಪಂಚಾಯ್ತಿ ಎಲೆಕ್ಷನ್​​​

*ಮೊದಲ ಹಂತಕ್ಕೆ ಡಿಸೆಂಬರ್​​​ 7ರಂದು ನಾಮಪತ್ರ ಸಲ್ಲಿಕೆ ಆರಂಭ,
*ಡಿಸೆಂಬರ್​​ 11ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ
*ಡಿಸೆಂಬರ್​​ 14ರಂದು ನಾಮಪತ್ರ ವಾಪಸ್​ಗೆ ಅವಕಾಶ
*ಡಿಸೆಂಬರ್​​ 22 ರಂದು ಮೊದಲ ಹಂತದ ಎಲೆಕ್ಷನ್​​​-
*ಡಿಸೆಂಬರ್​​-30ರಂದು ಪಂಚಾಯ್ತಿ ಎಲೆಕ್ಷನ್​ ಕೌಂಟಿಂಗ್​​​…

ಎರಡು ಹಂತದ ಗ್ರಾಮ ಪಂಚಾಯ್ತಿ ಎಲೆಕ್ಷನ್​​​

*ಎರಡನೇ ಹಂತಕ್ಕೆ ಡಿಸೆಂಬರ್​​​ 7ರಂದು ನಾಮಪತ್ರ ಸಲ್ಲಿಕೆ ಆರಂಭ
*ಡಿಸೆಂಬರ್​​ 16ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ
*ಡಿಸೆಂಬರ್​​ 19ರಂದು ನಾಮಪತ್ರ ವಾಪಸ್​ಗೆ ಅವಕಾಶ
*ಡಿಸೆಂಬರ್​​​ 17ರಂದು ನಾಮಪತ್ರ ಪರಿಶೀಲನೆ
*ಡಿಸೆಂಬರ್​​ 27 ರಂದು ಎರಡನೇ ಹಂತದ ಎಲೆಕ್ಷನ್​​​
*ಡಿಸೆಂಬರ್​​-30ರಂದು ಪಂಚಾಯ್ತಿ ಎಲೆಕ್ಷನ್​ ಕೌಂಟಿಂಗ್​​​…….