Breaking News

ಹಾಲಿವುಡ್​ ರೇಂಜ್​ನಲ್ಲಿ ಇರುತ್ತಂತೆ KGF 3..!

ವಿಜಯ್ ಕಿರಗಂದೂರು ಹೇಳೋದನ್ನ ಕೇಳಿದ್ರೆ ಶಾಕ್ ಆಗ್ತಿರಾ.....

SHARE......LIKE......COMMENT......

ಬೆಂಗಳೂರು:

ಯಶ್ ಅಭಿನಯದ ಬ್ಲಾಕ್ ಬಸ್ಟರ್ ಕೆಜಿಎಫ್ 2 ಚಿತ್ರ ಸದ್ಯ ಎಲ್ಲಾ ದಾಖಲೆಗಳನ್ನೂ ಮುರಿದುಹಾಕಿದೆ. ಇದೀಗ ಎಲ್ಲಡೆ ಕೆಜಿಎಫ್ 3 ಕುರಿತ ಚರ್ಚೆಗಳು ಆರಂಭವಾಗಿದೆ. ಇದರ ನಡುವೆ ಚಿತ್ರದ ನಿರ್ಮಾಪಕ ವಿಜಯ್ ಕಿರಂಗದೂರು ಕೆಜಿಎಫ್ 3 ಕುರಿತು ದೊಡ್ಡ ಹೇಳಿಕೆಯೊಂದನ್ನು ನೀಡಿದ್ದಾರೆ. ಕೆಜಿಎಫ್ 2 ಸೃಷ್ಟಿಸಿದ ಅಲೆ ಇನ್ನೂ ಮುಗಿದಿಲ್ಲ. 2022 ರ ಭಾರತದ ಅತಿದೊಡ್ಡ ಚಿತ್ರ ಯಾವುದು ಎಂದರೆ ಯಾರಾದರೂ ನಿಸಂಶಯವಾಗಿ ಕೆಜಿಎಫ್ 2 ಎಂದು ಹೇಳುತ್ತಾರೆ. ಇದರ ನಡುವೆ ಇನ್ನೂ ಸಿನಿಪ್ರೀಯರು ಕೆಜಿಎಫ್ 2 ಹ್ಯಾಂಗೋವರ್ ನಿಂದ ಹೊರಬಂದಿಲ್ಲ. ಇದರ ನಡುವೆ ಪ್ರೇಕ್ಷಕರನ್ನು ರೋಮಾಂಚನಗೊಳಿಸುವ ಘೋಷಣೆಯೊಂದು ಹೊರಬಿದ್ದಿದೆ. ಕೆಜಿಎಫ್ 3 ಕುರಿತು ಎಲ್ಲಡೆ ಮಾತನಾಡುತ್ತಿರುವಾಗಲೇ ಚಿತ್ರದ ನಿರ್ಮಾಪಕರು ದೊಡ್ಡ ಮಾಹಿತಿಯೊಂದನ್ನು ಹೊರಹಾಕಿದ್ದು, ಕೆಜಿಎಫ್ 3 ಬರುವುದು ಖಚಿತಪಡಿಸಿದ್ದಾರೆ. ಕೆಜಿಎಫ್ 3 ಚಿತ್ರದ ಚಿತ್ರೀಕರಣ ಈ ವರ್ಷ ಪ್ರಾರಂಭವಾಗಲಿದೆ. ಚಿತ್ರದ ನಿರ್ಮಾಪಕ ವಿಜಯ್ ಕಿರಗುಂದೂರು ಅವರೇ ಈ ಮಾಹಿತಿಯನ್ನು ನೀಡಿದ್ದಾರೆ.

ಕೆಜಿಎಫ್ 2 ಏಪ್ರಿಲ್ 14 ರಂದು ಬಿಡುಗಡೆಯಾಗಿ ಬಿಡುಗಡೆಯಾದ ದಿನದಿಂದಲೂ ದಾಖಲೆಗಳನ್ನು ಮಾಡುತ್ತಲಿದೆ. ಇದೀಗ ಅಧಿಕೃತವಾಗಿ ಎಂಬಂತೆ ಈ ಚಿತ್ರದ ಮೂರನೇ ಭಾಗ ಅನೌನ್ಸ್ ಆಗಿದೆ. ಚಿತ್ರದ ಮೂರನೇ ಭಾಗ ಬರುತ್ತಿರುವುದು ಮಾತ್ರವಲ್ಲದೆ, ನಿರ್ಮಾಪಕರು ಇನ್ನೂ ಕೆಲವು ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಅಧ್ಯಾಯ 3 ಭಾರತೀಯ ಚಿತ್ರರಂಗದಲ್ಲಿ ಹಿಂದೆಂದೂ ನೋಡಿರದ ಮೇಕಿಂಗ್ ಅನ್ನು ಹೊಂದಿರುತ್ತದೆ ಎಂದು ಹೇಳಿದ್ದಾರೆ.

ವಿಜಯ್ ಕಿರಗಂದೂರು ಹೊಂಬಾಳೆ ಫಿಲ್ಮಂ ನಲ್ಲಿಯೇ ಕೆಜಿಎಫ್ 3 ಚಿತ್ರವೂ ನಿರ್ಮಾಣವಾಗಲಿದ್ದು, ಹಾಲಿವುಡ್​ನ ಮಾರ್ವೆಲ್ ಸ್ಟೈಲ್ ನಲ್ಲಿ ಚಿತ್ರ ಮೂಡಿಬರಲಿದೆ ಎಂದು ಸಂದರ್ಶನವೊಂದರಲ್ಲಿ ನಿರ್ಮಾಪಕರು ಸ್ಪಷ್ಟಪಡಿಸಿದ್ದಾರೆ.

ದೈನಿಕ್ ಭಾಸ್ಕರ್‌ಗೆ ನೀಡಿದ ಸಂದರ್ಶನದಲ್ಲಿ ವಿಜಯ್ ಕಿರಗಂದೂರು ಮಾತಾನಡಿದ್ದು, ನಾವು ಮಾರ್ವೆಲ್ ಫಿಲ್ಮ್ಸ್ ಅನ್ನು ಯೋಜಿಸುತ್ತಿದ್ದೇವೆ. ಡಾಕ್ಟರ್ ಸ್ಟ್ರೇಂಜ್ ಪೋಲೋ ಅಥವಾ ಸ್ಪೈಡರ್‌ಮ್ಯಾನ್ ಹೋಮ್ ಕಮಿಂಗ್ ಪೋಲೋನಂತಹ ಹಲವಾರು ಚಲನಚಿತ್ರಗಳ ರೀತಿಯಲ್ಲಿ ಹಲವಾರು ಪಾತ್ರಗಳನ್ನು ಒಂದೇ ಚಿತ್ರದಲ್ಲಿ ತರಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ ಎಂದು ಹೇಳಿದ್ದಾರೆ.

ಇಂತಹ ಪ್ರಯೋಗದ ಮೂಲಕ ಚಿತ್ರ ಇನ್ನಷ್ಟು ಪ್ರೇಕ್ಷಕರನ್ನು ತಲುಪಲಿ ಎಂಬುದು ನಿರ್ಮಾಪಕರ ಆಶಯ. ಆದರೆ, ಈ ವರ್ಷದಿಂದ ಕೆಜಿಎಫ್ 3 ಚಿತ್ರೀಕರಣ ಶುರುವಾಗಲಿದೆ ಎಂದಿದ್ದಾರೆ.

ನಿರ್ದೇಶಕ ಪ್ರಶಾಂತ್ ನೀಲ್ ಸದ್ಯ ಪ್ರಭಾಸ್ ಅಭಿನಯದ ಸಲಾರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಶೇ.30-35ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಸಲಾರ್ ಚಿತ್ರದ ಚಿತ್ರೀಕರಣ ಅಕ್ಟೋಬರ್-ನವೆಂಬರ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇದಾದ ಬಳಿಕ ಪ್ರಶಾಂತ್ ನೀಲ್ ಕೆಜಿಎಫ್ 3 ಚಿತ್ರಕ್ಕೆ ತಯಾರಿ ನಡೆಸಲಿದ್ದಾರೆ. ಕೆಜಿಎಫ್ 3 ಚಿತ್ರದ ಚಿತ್ರೀಕರಣ ಈ ವರ್ಷದ ಅಕ್ಟೋಬರ್‌ನಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. 2024ರಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂಬುದು ನಿರ್ಮಾಪಕರ ಆಶಯ……