ಸ್ಯಾಂಡಲ್ವುಡ್:
ಕೆಜಿಎಫ್ ಬಿಡುಗಡೆಯಾಗಿದ್ದು ರಾಕಿಂಗ್ ಸ್ಟಾರ್ಗೆ ಭಾರಿ ಖುಷಿ ತಂದಿದೆ ಜತೆಗೆ ಬೇಸರವೂ ಕೂಡ ಖುಷಿ ಏಕೆಂದರೆ ಸಿನಿಮಾ ಟೀಸರ್ ಬಿಡುಗಡೆಯಾದ ದಿನದಿಂದ ಹಿಡಿದು ಚಿತ್ರ ಬಿಡುಗಡೆಯಾದ ದಿನದವರೆಗೂ ಫುಲ್ ಹಿಟ್ ಆಗಿದೆ,ಈ ಎಲ್ಲ ಖುಷಿಯ ಅಲೆಯ ಬೆನ್ನಲ್ಲೇ ತಮ್ಮ ನೆಚ್ಚಿನ ಅಂಬಿಯಣ್ಣನನ್ನು ನೆನೆಯಲು ಮರೆಯಲಿಲ್ಲ…
ಕಳೆದ ನವೆಂಬರ್ 24ರಂದು ಇಹಲೋಕ ತ್ಯಜಿಸಿದ ರೆಬೆಲ್ ಸ್ಟಾರ್ಗೆ ಯಶ್ ಎಂದರೆ ಎಲ್ಲಿಲ್ಲದ ಪ್ರೀತಿ ತಮ್ಮ ಬಹು ನಿರೀಕ್ಷಿತ ಚಿತ್ರದ ಬಿಡುಗಡೆ ದಿನ ಅಂಬಿಯಣ್ಣ ಇಲ್ಲವಲ್ಲ ಎಂಬ ಕೊರಗು ಕಾಡುತ್ತಿದೆ. ಆದರೆ ಟೀಸರ್ ನೋಡಿದ ಖುಷಿ ಯಶ್ಗೆ ಇದೆ. KGF ಬಿಡುಗಡೆ ದಿನವೇ ಅಂಬಿ ಮನೆಗೆ ಯಶ್ ಭೇಟಿ ನೀಡಿ ಭಾವಚಿತ್ರಕ್ಕೆ ನಮಿಸಿ, ಅಂಬಿ ಪತ್ನಿ ಸುಮಲತಾ, ಪುತ್ರ ಅಭಿಷೇಕ್ ಜತೆ ಮಾತುಕತೆ ನಡೆಸಿದರು….