ಶಬರಿಮಲೆ:
ಶಬರಿಮಲೆ ದೇಗುಲಕ್ಕೆ ಇಬ್ಬರು ಮಹಿಳೆಯರು ಎಂಟ್ರಿ ಕೊಟ್ಟಿದ್ದಾರೆ..ಯೆಸ್ ಇಂದು ಮುಂಜಾನೆ ಸುಮಾರು 3.45 ಗಂಟೆಗೆ ದೇಗುಲ ಪ್ರವೇಶಿಸಿದ ನಾರಿಯರು
ಕನಕದುರ್ಗಾ ಮತ್ತು ಬಿಂದು ಎಂಬ ಮಹಿಳೆಯರಿಂದ ದೇಗುಲ ಪ್ರವೇಶ ಮಾಡಿದ್ದಾರೆ,ಈ ಇಬ್ಬರೂ ಮಹಿಳೆಯರು, 40 ವರ್ಷದೊಳಗಿನವರು….
ಹೌದು ನಿರಂತರ ಹೋರಾಟದ ಬಳಿಕ ದೇಗುಲ ಪ್ರವೇಶಿಸಿದ ಮಹಿಳೆಯರು, ಸುಪ್ರೀಂ ಕೋರ್ಟ್ ಆದೇಶ ಇದ್ದರೂ ಮೊದಲು ಭಕ್ತರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು ಆದರೆ ಇಂದು ಕೊನಗೂ ಮಹಿಳೆಯರಿಗೆ ಜಯ ಸಿಕ್ಕಿದೆ…ಬಿಗಿ ಪೊಲೀಸ್ ಬಂದೋಬಸ್ತ್ ಮೂಲಕ ಇತಿಹಾಸ ನಿರ್ಮಾಣ ಮಾಡಿ ಕನಕದುರ್ಗಾ ಹಾಗೂ ಬಿಂದು ಶಬರಿಮಲೆ ದೇಗುಲಕ್ಕೆ ಎಂಟ್ರಿ ಕೊಟ್ಟಿದ್ದಾರೆ…
ಸಿಪಿಐ ಸಂಘಟನೆಯ ಕಾರ್ಯಕರ್ತೆಯಾಗಿರುವ ಕನಕದುರ್ಗಾ ಬೆಳಗ್ಗೆ ಧ್ವಜ ಸ್ತಂಬದ ಬಳಿ ಕಾಣಿಸಿಕೊಂಡಿದ್ದಾರೆ…ಕನಕದುರ್ಗಾ ಹಾಗೂ ಬಿಂದು-ಮಾಲಧಾರಿಗಳಾಗಿ ದೇಗುಲದ ಒಳಗಿಂದ ಬರ್ತಿರುವಾಗ ಕಾಣಿಸಿಕೊಂಡಿದ್ದಾರೆ,ಯೆಸ್ ಧ್ವಜ ಸ್ತಂಭದ ಬಳಿ ಬಂದಿರೋದ್ರಿಂದ ದೇಗುಲ ಪ್ರವೇಶ ಮಾಡಿರೋದು ಕನ್ಫರ್ಮ್ ಆಗಿದೆ……