ಮೈಸೂರು:
ಮೈಸೂರು ವಿಶ್ವವಿದ್ಯಾಲಯದ ದೂರ ಶಿಕ್ಷಣ ಕೋರ್ಸ್ಗೆ ವಿದ್ಯಾರ್ಥಿಗಳ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದರೆ, ಪಕ್ಕದಲ್ಲೇ ಇರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ದೂರ ಶಿಕ್ಷಣ ಕೋರ್ಸ್ಗಳಿಗೆ ವಿದ್ಯಾರ್ಥಿಗಳ ಪ್ರತಿಕ್ರಿಯೆ ಭರ್ಜರಿಯಾಗಿದೆ.
ಕೆಎಸ್ಒಯು ದೂರ ಶಿಕ್ಷಣ ಕೋರ್ಸ್ಗೆ ಈ ಶೈಕ್ಷಣಿಕ ಸಾಲಿಗೆ ಪ್ರವೇಶ ಪಡೆಯಲು ಅ. 20 ಕೊನೆ ದಿನವಾಗಿತ್ತು. ಒಟ್ಟು 29 ಕೋರ್ಸ್ಗಳಿಂದ ಸುಮಾರು 12 ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಕೆಎಸ್ಒಯುಗೆ ಕೆಲವು ವರ್ಷಗಳ ಕಾಲ ಮಾನ್ಯತೆ ರದ್ದಾಗಿತ್ತು. ವಿವಿಗೆ ಮೂರು ವರ್ಷ ವಿದ್ಯಾರ್ಥಿಗಳ ಪ್ರವೇಶ ಇರಲಿಲ್ಲ. ಯುಜಿಸಿ ನಿಯಮಾವಳಿಗಳನ್ನು ಉಲ್ಲಂಘಿಸಿದ ಕಳಂಕ ಮುಕ್ತ ವಿವಿಗೆ ಅಂಟಿತ್ತು.
ಯುಜಿಸಿ ಈ ಬಾರಿ ಮತ್ತೆ ಮಾನ್ಯತೆ ನೀಡಿ ವಿವಿಧ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ಅನುಮತಿಸಿತು. ಇಂತಹ ಸಂದರ್ಭದಲ್ಲೂ ಕೆಎಸ್ಒಯುಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಉತ್ಸಾಹದಲ್ಲಿರುವುದು ಕಂಡು ಬಂದಿದೆ. ಪುರುಷರಿಗಿಂತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆದಿದ್ದಾರೆ.
ಕೆಎಸ್ಒಯು ಮೈಸೂರು ಕೇಂದ್ರದಲ್ಲಿ ಅತಿ ಹೆಚ್ಚು 5 ಸಾವಿರ, ಕಾರವಾರ ಕೇಂದ್ರದಲ್ಲಿ ಅತಿ ಕಡಿಮೆ 78 ವಿದ್ಯಾರ್ಥಿಗಳು ವಿವಿಧ ಕೋರ್ಸ್ಗಳಿಗೆ ಪ್ರವೇಶ ಅರ್ಜಿ ಸಲ್ಲಿಸಿದ್ದಾರೆ. ಹಾಸನ 792, ಬೆಂಗಳೂರಿನ ಚಾಮರಾಜಪೇಟೆ ಕೇಂದ್ರ 710, ಮಲ್ಲೇಶ್ವರಂ ಕೇಂದ್ರ 524, ಧಾರವಾಡ 541, ಮಂಡ್ಯ 511, ಕಲಬುರ್ಗಿ 405, ಬಳ್ಳಾರಿ 319, ಮಂಗಳೂರು ಕೇಂದ್ರದಲ್ಲಿ 199 ವಿದ್ಯಾರ್ಥಿಗಳು ಪ್ರವೇಶ ಪಡೆದು ದೂರ ಶಿಕ್ಷಣದ ಮೂಲಕ ತಮ್ಮ ವ್ಯಾಸಂಗವನ್ನು ಮುಂದುವರಿಸಿದ್ದಾರೆ……