Breaking News

ಜೆಡಿಎಸ್​ನಲ್ಲಿ ಮೂರೇ ಜನ ಆದರೆ ರಾಜ್ಯ ಆಳುತ್ತಿದ್ದೇವೆ..!

ಯಂಕ, ಸೀನ, ನಾಣಿ ವಿಚಾರಕ್ಕೆ ಸಿಎಂ ತಿರುಗೇಟು....

SHARE......LIKE......COMMENT......

ಮೈಸೂರು:

ಯಂಕ, ಸೀನ, ನಾಣಿಯರನ್ನಿಟ್ಟುಕೊಂಡೇ ರಾಜ್ಯ ಆಳುತ್ತಿದ್ದೇವೆ. ನಮ್ಮ ಪಕ್ಷದಲ್ಲಿ ಮೂರೇ ಜನ ಇರಬಹುದು. ಆದರೂ ನಾವೆಲ್ಲ ರಾಜ್ಯ ಆಳುತ್ತಿದ್ದೇವೆ. ನಾವು ವಿಧಾನ ಪರಿಷತ್ತಿನ ಮೂಲಕ ಅಧಿಕಾರ ಪಡೆದಿಲ್ಲ. ಜನರ ಬಳಿ ಹೋಗಿ ಆಯ್ಕೆಯಾಗಿ ಆಡಳಿತ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಚುನಾವಣಾ ಪ್ರಚಾರದ ವೇಳೆ ಮಾತನಾಡಿ, ಜೆಡಿಎಸ್‌ನಲ್ಲಿ ಮಾತ್ರ ಅಪ್ಪ-ಮಕ್ಕಳು, ಅಣ್ಣ- ತಮ್ಮ ಇರೋದಾ? ಬಿಜೆಪಿಯಲ್ಲಿ ಇಲ್ಲವೆ? ಶಿವಮೊಗ್ಗದಲ್ಲಿ ಯಡಿಯೂರಪ್ಪ ಅವರ ಮಗನನ್ನು ಬಿಟ್ಟು ಇನ್ಯಾರೂ ಅಭ್ಯರ್ಥಿ ಇರಲಿಲ್ಲವೆ? ಎಷ್ಟು ಪಕ್ಷಗಳಲ್ಲಿ ಅಪ್ಪ-ಮಕ್ಕಳು, ಅಣ್ಣ- ತಮ್ಮ ಇಲ್ಲ? ಈ ಯಂಕ, ಸೀನ, ನಾಣಿ ಎಲ್ಲ ಯಡಿಯೂರಪ್ಪ ಅವರಿಗೆ, ನಮಗಲ್ಲ ಎಂದು ಬಿಎಸ್‌ವೈ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಉಪಚುನಾವಣೆಗಾಗಿ ನಾವು ವಿಧಾನಸೌಧಕ್ಕೆ ಬೀಗ ಹಾಕಿಲ್ಲ. ವಿಧಾನಸೌಧವೂ ನಡೆಯುತ್ತಿದೆ, ಉಪಚುನಾವಣೆಯೂ ನಡೆಯುತ್ತಿದೆ ಎಂದರು….