ಕೊಯಮತ್ತೂರು:
ತಮಿಳುನಾಡಿನ ಕೊಯಮತ್ತೂರಿನಲ್ಲಿ ಘಟನೆ ನಡೆದಿದ್ದು, 20 ನೇ ವಯಸ್ಸಿನ ಆರೋಪಿ ಪಾಲಕರು ಇಲ್ಲದ ವೇಳೆ ಒಂಬತ್ತನೇ ತರಗತಿಯ ತನ್ನ ತಂಗಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತಂಗಿ ಮೇಲೆ ಅಣ್ಣನೇ ಒಂದು ವರ್ಷದಿಂದ ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ್ದು, ಶಾಲೆಯ ಶಿಕ್ಷಕರು ವಿದ್ಯಾರ್ಥಿನಿ ಗರ್ಭಿಣಿಯಾಗಿರುವ ಕುರಿತು ಶಂಕೆ ವ್ಯಕ್ತಪಡಿಸಿದ ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಘಟನೆ ಕುರಿತಂತೆ ವಿದ್ಯಾರ್ಥಿನಿ ವಿವರಿಸಿದ ಬಳಿಕ ಪೊಕ್ಸೊ ಕಾಯಿದೆಯಡಿ ಸಂತ್ರಸ್ತೆಯ ಅಣ್ಣನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ……