ನ್ಯೂಜಿಲೆಂಡ್:
ನ್ಯೂಜಿಲೆಂಡ್ನಲ್ಲಿ ಕಳೆದ ರಾತ್ರಿ ವ್ಯಕ್ತಿಯೊಬ್ಬ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ. ಕ್ರೈಸ್ಟ್ಚರ್ಚ್ನ ಮಸ್ಜಿದ್ ಅಲ್ ನೂರ್ ಮಸೀದಿ ಸೇರಿ ಎರಡು ಕಡೆ ಫೈರಿಂಗ್ ನಡೆದಿದೆ. ಗುಂಡಿನ ದಾಳಿಯಲ್ಲಿ 6 ಮಂದಿ ಸಾವನ್ನಪ್ಪಿದ್ದು, ಹಲವರು ಗಂಭೀರ ಗಾಯಗೊಂಡಿದ್ದಾರೆ. ಭಯೋತ್ಪಾದಕ ಗುಂಡಿನ ದಾಳಿ ನಡೆಸಿರೋ ಶಂಕೆ ವ್ಯಕ್ತವಾಗಿದೆ. ಶುಕ್ರವಾರದ ಪ್ರಾರ್ಥನೆ ವೇಳೆ ಅಪರಿಚಿತ ವ್ಯಕ್ತಿ ಗುಂಡಿನ ದಾಳಿ ನಡೆಸಿದ್ದಾನೆ. ದಾಳಿ ನಡೆಯುವ ಕೆಲಹೊತ್ತಿನ ಹಿಂದೆ ಕ್ರಿಕೆಟಿಗರು ಪ್ರಾರ್ಥನೆಯನ್ನು ಸಲ್ಲಿಸಿದ್ರು. ಕ್ರಿಕೆಟಿಗರು ಸುರಕ್ಷಿತರಾಗಿದ್ದಾರೆ ಅಂತಾ ಪೊಲೀಸರು ಮಾಹಿತಿಯನ್ನು ನೀಡಿದ್ದು, ಸದ್ಯ ಓರ್ವ ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ……