ನವದೆಹಲಿ:
ಮೋದಿ ಸರ್ಕಾರದ ರಫೇಲ್ ಡೀಲ್ ಆರೋಪದ ಬೆನ್ನಲ್ಲೇ ಹಿಂದಿನ ಯುಪಿಎ ಸರ್ಕಾರದ ಮತ್ತೊಂದು ಬಹುಕೋಟಿ ಹಗರಣ ಬೆಳಕಿಗೆ ಬಂದಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಏರ್ ಇಂಡಿಯಾ-ಇಂಡಿಯನ್ ಏರ್‌ಲೈನ್ಸ್ ವಿಲೀನ ವೇಳೆ 70 ಸಾವಿರ ಕೋಟಿ ಅಕ್ರಮ ಮತ್ತು ಭ್ರಷ್ಟಾಚಾರ ನಡೆದಿದೆ ಎನ್ನಲಾಗಿದೆ. ಈ ಸಂಬಂಧ ಏರ್ ಇಂಡಿಯಾ ವಿರುದ್ಧ ನಾಲ್ಕು ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ವಿದೇಶಿ ವಿಮಾನ ತಯಾರಿಕಾ ಕಂಪನಿಗೆ ಲಾಭ ಮಾಡಿಕೊಡೋ ಉದ್ದೇಶದಿಂದ ಈ ರಾಷ್ಟ್ರೀಯ ಏರ್‌ಲೈನ್ಸ್‌ಗಳಿಗೆ 70 ಸಾವಿರ ಕೋಟಿ ವೆಚ್ಚದಲ್ಲಿ 111 ವಿಮಾನ ಖರೀದಿಸಲಾಗಿತ್ತು. ಇದ್ರಿಂದ ನಷ್ಟದಲ್ಲಿದ್ದ ಏರ್ ಇಂಡಿಯಾಗೆ ಇದ್ರಿಂದ ಮತ್ತಷ್ಟು ಹೊರೆ ಬಿದ್ದಿದೆಯೆಂದು ಸಿಎಜಿ ವರದಿ ತಿಳಿಸಿತ್ತು……