Breaking News

ವಾರಾಣಸಿಯಿಂದ 2ನೇ ಬಾರಿ ಪ್ರಧಾನಿ ಮೋದಿ ಕಣಕ್ಕೆ…..

ವಾರಾಣಸಿಯ ಡಿಸಿ ಕಚೇರಿಯಲ್ಲಿ ಇಂದು ನಾಮಿನೇಷನ್....​​

SHARE......LIKE......COMMENT......

ವಾರಾಣಸಿ:

ವಾರಾಣಸಿಯಿಂದ ಎರಡನೇ ಬಾರಿ ಪ್ರಧಾನಿ ಮೋದಿ ಕಣಕ್ಕಿಳಿದಿದ್ದಾರೆ. ನಿನ್ನೆ ರೋಡ್​ ಶೋನಲ್ಲಿ ಹವಾ ಸೃಷ್ಟಿ ಮಾಡಿದ್ದ ಮೋದಿ ಇವತ್ತು ನಾಮಿನೇಷನ್​​ ದಿನವೂ ಅಬ್ಬರ ಕ್ರಿಯೇಟ್ ಮಾಡಿದ್ರು. ವಾರಾಣಸಿಯ ರಿಫಲ್​ ಕ್ಲಬ್​​​​ ಹಾಲ್​​ನಲ್ಲಿರುವ ಡಿಸಿ ಕಚೇರಿಯಲ್ಲಿ ನಾಮಿನೇಷನ್ ಮಾಡಿದ್ರು. ಜಿಲ್ಲಾಧಿಕಾರಿ ಸುರೇಂದ್ರ ಸಿಂಗ್​​​ ಅವರಿಗೆ ನಾಮಿನೇಷನ್​ ಸಲ್ಲಿಸಿದ ನಮೋಗೆ ನಾಲ್ವರು ಸೂಚಕರು ಪ್ರಮಾಣ ಪತ್ರ ಸಲ್ಲಿಕೆ ಮಾಡಿದ್ರು. ಮಣಿಕರ್ಣಿಕ ಘಾಟ್​​ನ ಕಾವಲುಗಾರ ಜಗದೀಶ್ ರಾಜ,ಕೃಷಿ ತಜ್ಞರಾದ ರಾಮಶಂಕರ್ ಪಟೇಲ್, ಆರ್​ಎಸ್​​ಎಸ್​​ ಸಂಚಾಲಕ ಸುಭಾಷ್ ಗುಪ್ತಾ ಮತ್ತು ಮದನ್ ಮೋಹನ್ ಮಾಳವಿಯ ಮೊಮ್ಮಗಳು ಅನ್ನಪೂರ್ಣ ಶುಕ್ಲಾ ಸೂಚಕರಾಗಿದ್ದರು. ನಾಮಿನೇಷನ್​​ ಸಲ್ಲಿಸಿದ ನಂತರ ಡಿಸಿ ಕಚೇರಿಯಿಂದ ಹೊರಬಂದ ಮೋದಿ ಅವರನ್ನು ಸಾವಿರಾರು ಕಾರ್ಯಕರ್ತರು ರಸ್ತೆ ಇಕ್ಕೆಲದಲ್ಲಿ ನಿಂತು ಬೀಳ್ಕೊಟ್ಟರು. ಇದೇ ವೇಳೆ ಮಾತ್ನಾಡಿದ ಮೋದಿ ಕಾಶಿ ಜನರಿಗೆ ನಾನು ಆಭಾರಿ ಎಂದರು…..