Breaking News

“ಬ್ಯಾರೇನೇ ಐತಿ ” ಎನ್ನುತ್ತಿದ್ದಾನೆ ಗುರುದೇವ್ ಹೊಯ್ಸಳ ..!

ಮಾರ್ಚ್ 30ರಂದು ವಿಶ್ವದಾದ್ಯಂತ ರಿಲೀಸ್...

SHARE......LIKE......COMMENT......

ಸಿನಿಮಾ:
ಡಾಲಿ ಧನಂಜಯ ಅಭಿನಯದ 25ನೇ ಸಿನಿಮಾ ‘ಗುರುದೇವ್ ಹೊಯ್ಸಳ’, ದಿನೇ ದಿನೇ ಸಿನಿಪ್ರಿಯರ ಕುತೂಹಲ ಹೆಚ್ಚಿಸುತ್ತಿದೆ. ಮಾಸ್ ಟ್ರೈಲರ್, ಹಿಟ್ ಹಾಡುಗಳನ್ನ ಬಿಡುಗಡೆ ಮಾಡಿರುವ ಚಿತ್ರತಂಡ ಈಗಾಗಲೇ ಅರ್ಧ ಸಕ್ಸಸ್ ಕಂಡಂತಿದೆ. ಇದಕ್ಕೆ ಸರಿಯಾಗಿ ಇಂದು ‘ಗುರುದೇವ್ ಹೊಯ್ಸಳ’ ಸಿನೆಮಾ ತಂಡ ಮೂರನೇ ಹಾಡನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಿದೆ.”ಬ್ಯಾರೇನೇ ಐತಿ” ಎನ್ನುವ ಈ ಹಾಡು ಉತ್ತರ ಕರ್ನಾಟಕ ಭಾಗದಲ್ಲಿ ವಾಸವಾಗಿರುವ ಅಲೆಮಾರಿಗಳ ಜೀವನ ಹೇಗಿರುತ್ತದೆ ಎಂದು ವರ್ಣನೆ ಮಾಡುತ್ತದೆ. ಅಲೆಮಾರಿಗಳ ಬಗ್ಗೆ ಇರುವ ಈ ಹಾಡಿಗೆ ಯೋಗರಾಜ್ ಭಟ್ ರವರು ಸಾಹಿತ್ಯ ಬರೆದಿದ್ದು, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ರವರು ಹಾಡಿಗೆ ಹೊಸ ರೂಪ ಕೊಟ್ಟು, ರಚನೆ ಮಾಡಿ ಬಹಳ ಸೊಗಸಾಗಿ ಹಾಡಿದ್ದಾರೆ.

ಕೆ.ಆರ್.ಜಿ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಯೋಗಿ. ಜಿ. ರಾಜ್ ಹಾಗೂ ಕಾರ್ತಿಕ್ ಗೌಡ ನಿರ್ಮಿಸಿರುವ ‘ಗುರುದೇವ್ ಹೊಯ್ಸಳ’ ಸಿನಿಮಾ ಇದೇ ಮಾರ್ಚ್ 30ರಂದು ವಿಶ್ವದಾದ್ಯಂತ ಕನ್ನಡ ಭಾಷೆಯಲ್ಲಿಯೇ ಬಿಡುಗಡೆಯಾಗಲಿದೆ. ವಿಜಯ್ ಎನ್ ರವರು ಆಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.
ಈ ಚಿತ್ರದಲ್ಲಿ ಮಾಸ್ ಮತ್ತು ಖಡಕ್ ಪೊಲೀಸ್ ಪಾತ್ರ ಧರಿಸಿರುವ ಡಾಲಿಗೆ ಜೋಡಿಯಾಗಿ ಅಮೃತಾ ಅಯ್ಯಂಗಾರ್ ಕಾಣಿಸಿಕೊಂಡಿದ್ದಾರೆ. ಅಚ್ಯುತ್ ಕುಮಾರ್, ನವೀನ್ ಶಂಕರ್, ಅವಿನಾಶ್, ಪ್ರತಾಪ್ ನಾರಾಯಣ್, ರಾಜೇಶ್ ನಟರಂಗ, ನಾಗಭೂಷಣ್ ಹಾಗೂ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.