ಚೆನೈ:
ಖ್ಯಾತ ನಟ ಅರ್ಜುನ್ ಸರ್ಜಾ ವಿರುದ್ಧ ಸಹ ನಟಿ ಶ್ರುತಿ ಹರಿಹರನ್ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದು, ಬಹುಭಾಷಾ ನಟಿ ಖುಷ್ಬೂ ಇದೀಗ ಅರ್ಜುನ್ ಸರ್ಜಾಗೆ ಬೆಂಬಲ ಸೂಚಿಸಿದ್ದಾರೆ. ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಖುಷ್ಬೂ, ತಮ್ಮ ಮತ್ತು ಅರ್ಜುನ್ ಸರ್ಜಾ ಜೊತೆಗಿನ ಸುಮಾರು 34 ವರ್ಷಗಳ ಒಡನಾಟವನ್ನು ಹೇಳಿಕೊಂಡಿದ್ದಾರೆ. ಅರ್ಜುನ್ ವಿರುದ್ಧ ಕೇಳಿಬಂದಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಖುಷ್ಬೂ, ಅರ್ಜುನ್ ಹಾಗೆ ಮಾಡಿರಲು ಎಂದಿಗೂ ಸಾಧ್ಯವಿಲ್ಲ ಎಂಬುದಕ್ಕೆ ನಾನು ಗ್ಯಾರಂಟಿ ಎಂದು ಹೇಳಿದ್ದಾರೆ……