Breaking News

ಇಂದಿರಾ ಕ್ಯಾಂಟೀನ್‌ನಲ್ಲಿ ಅನ್ನ-ಸಾಂಬಾರ್‌ ಮಾತ್ರ ಲಭ್ಯ..!

ಇಡ್ಲಿ, ರೊಟ್ಟಿ, ಪಲ್ಯಾ ಮಾಡಲು ಪಾತ್ರೆಗಳೇ ಇಲ್ಲ....

SHARE......LIKE......COMMENT......

ಗದಗ:

ಮಹಾತ್ವಕಾಂಕ್ಷಿಯ ಯೋಜನೆ ‘ಇಂದಿರಾ ಕ್ಯಾಂಟೀನ್‌’ಗೆ ಬೆಟಗೇರಿಯಲ್ಲಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ, ಆಹಾರ ಪಟ್ಟಿಯಲ್ಲಿ ತೋರಿಸಿದ್ದಷ್ಟು ಖಾದ್ಯಗಳ ಪೂರೈಕೆಯಿಲ್ಲ. ಕ್ಯಾಂಟೀನ್‌ ಆರಂಭಗೊಂಡು ವಾರ ಕಳೆದರೂ ಅನ್ನ-ಸಾಂಬರ್‌, ಪಲಾವ್‌ಗೆ ಸೀಮಿತಗೊಂಡಿದೆ.

ರಾಜ್ಯ ಸರಕಾರ, ಜಿಲ್ಲಾಡಳಿತ ಹಾಗೂ ನಗರಸಭೆ ಆಶ್ರಯದಲ್ಲಿ ಬೆಟಗೇರಿಯಲ್ಲಿ ‘ಇಂದೀರಾ ಕ್ಯಾಂಟೀನ್‌’ ಸ್ಥಾಪಿಸಿದ್ದು, ಅ. 5ರಿಂದ ಕಾರ್ಯಾರಂಭ ಮಾಡಿದೆ. ಕ್ಯಾಂಟೀನ್‌ ಉದ್ಘಾಟನೆಗೊಂಡು ಬರೋಬ್ಬರಿ ಒಂಬತ್ತು ದಿನಗಳು ಕಳೆದರೂ ಇಡ್ಲಿ ಪಾತ್ರೆ ಸೇರಿದಂತೆ ಇನ್ನಿತರೆ ಅಗತ್ಯ ಸಾಮಗ್ರಿಗಳೇ ಪೂರೈಕೆಯಾಗಿಲ್ಲ. ಹೀಗಾಗಿ ದಿನಕ್ಕೊಂದರಂತೆ ಬೆಳಗ್ಗೆ ಸಿರಾ-ಉಪ್ಪಿಟ್ಟು, ಪುರಿ-ಬೆಟಗೇರಿ ಚಟ್ನಿ, ಮಂಡಕ್ಕಿ ವಗ್ಗರಣೆ, ಅವಲಕ್ಕಿ ವಗ್ಗರಣೆ ಮಧ್ಯಾಹ್ನ ಹಾಗೂ ರಾತ್ರಿ ಪಲಾವ್‌, ಅನ್ನ ಸಂಬಾರ್‌, ಚಿತ್ರನ್ನಾವನಷ್ಟೇ ಉಣಬಡಿಸಲಾಗುತ್ತಿದೆ……