Breaking News

ಅವರಪ್ಪನಾಣೆ ಸಿಎಂ ಆಗಲ್ಲ ಎಂದು ಅವರಪ್ಪನ ಬುಡಕ್ಕೆ.!

ಪ್ರತಾಪ್​ ಸಿಂಹ ,ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ....

SHARE......LIKE......COMMENT......

ಶಿವಮೊಗ್ಗ:

ಸಿದ್ದರಾಮಯ್ಯನವರು ಎಚ್​.ಡಿ.ಕುಮಾರಸ್ವಾಮಿ ಅವರಿಗೆ ಅವರಪ್ಪನಾಣೆ ಸಿಎಂ ಆಗಲ್ಲ ಎಂದಿದ್ದರು. ಆದರೆ, ಈಗ ಅವರಪ್ಪನ ಬುಡಕ್ಕೇ ಹೋಗಿದ್ದಾರೆ ಎಂದು ಸಂಸದ ಪ್ರತಾಪ್​ ಸಿಂಹ ವಾಗ್ದಾಳಿ ನಡೆಸಿದ್ದಾರೆ.

ಜನಾರ್ದನ ರೆಡ್ಡಿ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ತಿರುಗೇಟು ನೀಡಿದ ಪ್ರತಾಪ್​ ಸಿಂಹ, ಸಿದ್ದರಾಮಯ್ಯ ನಡವಳಿಕೆ ಅಪ್ಪಟ್ಟವಾಗಿದ್ರೆ ನಾನು ಅವರಿಗೆ ಉತ್ತರ ಕೊಡುತ್ತಿದ್ದೆ. ನಾನು ‘ಮೈನಿಂಗ್​ ಮಾಫಿಯಾ’ ಪುಸ್ತಕ ಬರೆದಿದ್ದು 2010ರಲ್ಲಿ. ಆದರೆ, ಸಿದ್ದರಾಮಯ್ಯ ಅವರು ಮಾತಾಡಿ ಎಂಟು ತಿಂಗಳು ಕೂಡ ಆಗಿಲ್ಲ. ನೀಚ, ಅವನನ್ನು ಬೆಳಸಿಬಿಟ್ಟೆ ಅಂದವರು ಕೂಡ ಒಂದೇ ವೇದಿಕೆಯಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂದರು.

2006ರ ಮೊದಲು ಸೋನಿಯಾ ಗಾಂಧಿಯನ್ನು ಏಕವಚನದಲ್ಲಿ ಟೀಕಿಸಿದವರು ಈಗ ಅವರ ಬಳಿಯೇ ಹೋಗಿ ಕೈಮುಗಿದು ನಿಲ್ಲುತ್ತಾರೆ. ಇದಕ್ಕೆಲ್ಲ ಸಿದ್ದರಾಮಯ್ಯ ಉತ್ತರ ಕೊಟ್ಟರೆ, ನಾನು ನನ್ನ ಪುಸ್ತಕದ ಬಗ್ಗೆ ಆಡಿದ ಮಾತುಗಳಿಗೆ ಉತ್ತರ ಕೊಡುತ್ತೀನಿ ಎಂದರು…..