ಸಿನಿಮಾ:
ಇಷ್ಟು ದಿನಗಳ ಕಾಲ ಗಣೇಶ್ ಹಿಂದೆ ಚೆಂದದ ಹುಡುಗಿಯರು ಬೀಳುತ್ತಿದ್ದರು. ಆದರೆ ಈಗ ಚೆಂದದ ಪ್ರೇತಾತ್ಮಗಳಿಗೂ ಗಣಿ ಮೇಲೆ ಲವ್ ಆಗಿರುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. ಯೆಸ್, ಗೋಲ್ಡನ್ ಸ್ಟಾರ್ ಗಣೇಶ್ “ಗಿಮಿಕ್’ ಮಾಡಲು ಮುಂದಾಗಿದ್ದಾರೆ. ಇಷ್ಟು ದಿನಗಳ ಕಾಲ ಲವರ್ ಬಾಯ್ ಲುಕ್‍ನಲ್ಲಿ ಮನರಂಜಿಸಿದ್ದ ಗಣೇಶ್ ಮೊಟ್ಟ ಮೊದಲ ಬಾರಿಗೆ ಭಯ ಬೀಳಿಸಲು ಮುಂದಾಗಿದ್ದಾರೆ.
ಗಣೇಶ್ “ಗಿಮಿಕ್’ ಹೆಸರಿನ ಹಾರರ್ ಚಿತ್ರದಲ್ಲಿ ನಟಿಸುತ್ತಿದ್ದು, ಸದ್ಯ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.ಗಣೇಶ್ ಎದುರಿಗೆ ನಾಯಕಿಯಾಗಿ ಪಂಜಾಬಿ ನಟಿ ರೋನಿಕಾ ಸಿಂಗ್ ನಟಿಸುತ್ತಿದ್ದಾರೆ.ಅಲ್ಲದೇ ಚಿತ್ರದ ಬಹುತೇಕ ಚಿತ್ರೀಕರಣ ಶ್ರೀಲಂಕಾದಲ್ಲಿ ವಿಭಿನ್ನವಾಗಿರುವ ಮನೆಯೊಂದರಲ್ಲಿ ನಡೆಯಲಿದ್ದು, ಉಳಿದಂತೆ ಬೆಂಗಳೂರು, ಮೈಸೂರಿನಲ್ಲಿ ನಡೆಯಲಿದೆ…….