ಬೆಂಗಳೂರು:
ನ್ಯೂ ಇಯರ್ ಸೆಲೆಬ್ರೇಷನ್‌ನ ಹಾಟ್ ಸ್ಪಾಟ್ ಅಂದ್ರೆ ಅದು ಎಂ.ಜಿ ರೋಡ್ ಅಂಡ್ ಬ್ರಿಗೇಡ್ ರೋಡ್. ಪ್ರತಿವರ್ಷವೂ ಈ ಫ್ಲೇಸ್‌ನಲ್ಲಿ ಸೆಲೆಬ್ರೆಷನ್ ಜೋರಾಗಿತ್ತು. ಈ ಬಾರಿಯೂ ಹೊಸವರ್ಷವನ್ನೂ ಅದ್ಧೂರಿಯಾಗಿ ಸ್ವಾಗತಿಸಲು, ಯುವಸಮೂಹ ಸಜ್ಜಾಗ್ತಿದೆ. ಆದರೆ ಈ ಬಾರಿ ಎಂಜಿ ರೋಡ್‌ನಲ್ಲಿ ನ್ಯೂಇಯರ್ ಸಂಭ್ರಮಕ್ಕೆ ಬಿಬಿಎಂಪಿ ಬ್ರೇಕ್ ಹಾಕಲು ಮುಂದಾಗಿದೆ. ಪ್ರತಿವರ್ಷ ಎಂಜಿ ರಸ್ತೆ, ಬ್ರಿಗೆಡ್ ರಸ್ತೆಯಲ್ಲಿ ನ್ಯೂಇಯರ್ ಸೆಲೆಬ್ರೆಷನ್ ವೇಳೆ, ಪುಂಡಾರಿಗಳು ದುರ್ವತನೆ ತೋರಿ, ರಾಜಧಾನಿಯ ಮಾನ ಹರಾಜಾಗ್ತಿದ್ದಾರೆ.
ಹೀಗಾಗಿ ಇದರಿಂದ ಎಚ್ಚೆತ್ತಿರುವ ಬಿಬಿಎಂಪಿ ಮೇಯರ್. ಹೊಸವರ್ಷದ ಸೆಲೆಬ್ರೇಷನ್ ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳುವ ಮೂಲಕ ಈ ಬಾರಿ, ನ್ಯೂಇಯರ್ ಸಂಭ್ರಮಕ್ಕೆ ಬ್ರೇಕ್ ಹಾಕುವು ಸುಳಿವು ನೀಡಿದ್ದಾರೆ. ಇನ್ನು ಬಿಬಿಎಂಪಿ ಪಾರ್ಕ್‌ಗಳಲ್ಲಿ ಕ್ರಿಸ್‌ಮಸ್ ಪಾರ್ಟಿಯಾಗಲಿ, ನ್ಯೂಇಯರ್ ಪಾರ್ಟಿ ಮಾಡುವುದರಿಂದ, ಪಾರ್ಕ್‌ನ ಸ್ವಚ್ಛತೆಗೆ ಧಕ್ಕೆಯಾಗುತ್ತೆ. ಹೀಗಾಗಿ, ಈ ಬಾರಿ ಪಾಲಿಕೆಯ ಪಾರ್ಕ್‌ಗಳಲ್ಲಿ ಸೆಲೆಬ್ರೆಟ್ ಮಾಡಲು ಅವಕಾಶ ನೀಡ್ತಿಲ್ಲ ಎಂದು ಆಡಳಿತ ಪಕ್ಷದ ನಾಯಕರು ಹೇಳಿದ್ದಾರೆ……