ಬೆಂಗಳೂರು:
ಇತ್ತೀಚೆಗಷ್ಟೇ ಬಿಡುಗಡೆಯಾದ ಪೈಲ್ವಾನ್ ಸಿನಿಮಾ ಕುರಿತು ನೆಗೆಟಿವ್ ಕಾಮೆಂಟ್ ಮಾಡುತ್ತಿರುವವರಿಗೆ, ಅದರ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕೆಸರೆರಚಾಟ ಮಾಡುತ್ತಿರುವವರ ಬಗ್ಗೆ ಕೊನೆಗೂ ಕಿಚ್ಚ ಸುದೀಪ್ ಸುದೀರ್ಘ ಪತ್ರ ಬರೆದು ಖಡಕ್ ಸಂದೇಶ ಕೊಟ್ಟಿದ್ದಾರೆ.
ಎಲ್ಲರಿಗೂ ನಾನು ಮನವಿ ಮಾಡುತ್ತೇನೆ. ಎಲ್ಲರೂ ಅವರವರವ ಕೆಲಸದಲ್ಲಿ ತೊಡಗಿಸಿಕೊಂಡರೆ ಅವರಿಗೇ ಒಳ್ಳೆಯದು. ಇಂತಹ ಅಭಿಪ್ರಾಯಗಳಿಗೆ ಪ್ರತಿಕ್ರಿಯಿಸುವ ಬದಲು ಸುಮ್ಮನಿರುವುದೇ ಒಳ್ಳೆಯದು.ಇದರಿಂದ ನಾವು ಯಾರೂ ಚಿಕ್ಕವರಾಗಲ್ಲ. ಇಲ್ಲಿ ಯಾರೂ ಪೈರಸಿ ಬಗ್ಗೆ ಒಬ್ಬ ನಟನನ್ನು ದೂರಲಿಲ್ಲ. ನಾನು ಅಥವಾ ಚಿತ್ರತಂಡ ಯಾವುದೇ ನಟನ ಹೆಸರನ್ನೂ ಹೇಳಿಲ್ಲ. ಹೌದು, ಯಾರೋ ಈ ಕೃತ್ಯವೆಸಗಿದ್ದಾರೆ. ಅವರ ಹೆಸರನ್ನು ಸೈಬರ್ ಪೊಲೀಸರಿಗೆ ನೀಡಲಾಗಿದೆ, ಅವರು ತನಿಖೆ ನಡೆಸಿ ಸತ್ಯಾಂಶ ಹೊರಬರುತ್ತದೆ. ಹೀಗಾಗಿ ಈ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳಿಗೆ ವಿರಾಮವಿಡೋಣ. ನನ್ನ ನಿರ್ಮಾಪಕರನ್ನು ಕಾಪಾಡುವುದು ನನ್ನ ಜವಾಬ್ಧಾರಿ. ನನ್ನ ಜೀವನವನ್ನು ಉದ್ಧಾರ ಮಾಡಲು ಯಾರನ್ನೂ ತುಳಿದು ಬದುಕುವ ಸ್ಥಿತಿ ನನಗಿಲ್ಲ. ಚಿತ್ರರಂಗದ ನನ್ನ ಸ್ನೇಹಿತರು, ಅಭಿಮಾನಿಗಳು ನನ್ನ ಬಗ್ಗೆ ತೋರಿರುವ ಪ್ರೀತಿ, ಸ್ನೇಹವೇ ನನಗೆ ಸಾಕು.
ಪ್ರೀತಿಯಿರಲಿ,
ಕಿಚ್ಚ ಸುದೀಪ್