ದಾವಣಗೆರೆ:
ಇಲ್ಲಿದೆ ಸ್ವಚ್ಛಂದ ಪರಿಸರ. ತಣ್ಣನೆ ಗಾಳಿ, ಹರಿಯುವ ನೀರಿನ ಭೊರ್ಗರೆತ ಇವೆಲ್ಲಾ ವರ್ಣನೆಗೆ ಸಾಕ್ಷಿಯಂತೆ ಇರುವುದು ಈ ಡ್ಯಾಂ ಯೆಸ್ ಇದು ಜಿಲ್ಲೆಯ ಹರಿಹರ ತಾಲೂಕಿನ ದೇವರ ಬೆಳಕೆರೆ ಜಲಾಶಯ. ಇದು ಯಾವುದೇ ನದಿಗೆ ಅಡ್ಡಲಾಗಿ ಕಟ್ಟಿದ ಡ್ಯಾಂ ಅಲ್ಲ. ಶ್ಯಾಗಳೆ ಎಂಬ ಹೆಸರಿನ ಹಳ್ಳಕ್ಕೆ ಕಟ್ಟಲಾಗಿರುವ ಅಣೆಕಟ್ಟು…
ಈ ಜಲಾಶಯದಿಂದ ಹೊರಬರುವ ನೀರನ್ನು ನೋಡೋದೆ ಕಣ್ಣಿಗೆ ಚೆಂದ. ಅಷ್ಟು ಸೌಂದರ್ಯವನ್ನು ತನ್ನ ಒಡಲಲ್ಲಿ ತುಂಬಿಕೊಂಡಿದೆ ಜಲಾಶಯದ ಪರಿಸರ. ತುಂಗಾಭದ್ರಾ ನದಿ ತುಂಬಿದ ಬಳಿಕ ಈ ಹಳ್ಳಕ್ಕೆ ನೀರು ಬರುತ್ತದೆ. ಬರೋಬ್ಬರಿ ಎರಡು ದಶಕದ ಬಳಿಕ ಈ ಸೊಬಗು ಇಲ್ಲಿ ಸೃಷ್ಟಿಯಾಗಿರುವುದು ವಿಶೇಷ.
ಸೌಂದರ್ಯವನ್ನು ಮೈದುಂಬಿಕೊಂಡಿದ್ದರೂ ಇಲ್ಲಿ ಸಮಸ್ಯೆಗಳಿಗೇನೂ ಕಡಿಮೆ ಇಲ್ಲ. ಕುಳಿತುಕೊಳ್ಳಲು ಆಸನಗಳಿಲ್ಲ. ಕುಡಿಯಲು ನೀರಿಲ್ಲ. ಶೌಚಾಲಯ ವ್ಯವಸ್ಥೆ ಕೂಡ ಇಲ್ಲ.ಪ್ರತಿನಿತ್ಯ ಈ ಡ್ಯಾಂ ಬಳಿ ಪಕ್ಕದೂರುಗಳಿಂದ, ಬೇರೆ ಬೇರೆ ಜಿಲ್ಲೆಗಳಿಂದ ಪ್ರವಾಸಿಗರು ಬರುತ್ತಾರೆ. ಆದರೂ ಇಲ್ಲಿ ಮಾಹಿತಿಯುಳ್ಳ ಯಾವುದೇ ನಾಮಫಲಕ ಇಲ್ಲದಿರುವುದರಿಂದ ತೊಂದರೆ ಅನುಭವಿಸುತ್ತಿದ್ದಾರೆ.
ಇಲ್ಲಿನ ಸಮಸ್ಯೆಗಳು ಎಷ್ಟೇ ಇದ್ದರೂ ಪ್ರವಾಸಿಗರ ಸಂಖ್ಯೆ ಮಾತ್ರ ಕ್ಷೀಣಿಸಿಲ್ಲ. ವಿದ್ಯಾರ್ಥಿಗಳು, ನೌಕರರು ವೀಕೆಂಡ್ನಲ್ಲಿ ಇಲ್ಲಿಗೆ ಆಗಮಿಸಿ ಪ್ರಕೃತಿ ಮಾತೆಯ ಮಡಿಲಲ್ಲಿ ತಮ್ಮ ಸಂತೋಷದ ಸಮಯವನ್ನು ಕಳೆಯುತ್ತಾರೆ….