ಪಶ್ಚಿಮಬಂಗಾಳ:
ಲೋಕಸಭೆ ಚುನಾವಣೆಯ 4ನೇ ಹಂತಕ್ಕೆ ಮತದಾನ ಚುರುಕಿನಿಂದ ಸಾಗಿದೆ. ದೇಶದ ಎಲ್ಲೆಡೆ ಶಾಂತಿಯುತ ಮತದಾನ ಆಗ್ತಿದ್ದು, ಪಶ್ಚಿಮಬಂಗಾಳದ ಅಸನ್ಸೋಲ್ನಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಬಿಜೆಪಿ ಅಭ್ಯರ್ಥಿ ಬಬೂಲ್ ಸುಪ್ರಿಯೋ ಕಾರನ್ನು ಕೆಲವರು ಜಖಂಗೊಳಿಸಿದ್ದಾರೆ. ಏಜೆಂಟರ ವಿಚಾರಕ್ಕೆ ಬೂತ್ನಲ್ಲಿ ಗಲಾಟೆ ಶುರುವಾಗಿ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಈವರೆಗೆ ದೇಶಾದ್ಯಂತ ಶೇಕಡಾ 11ರಷ್ಟು ಮತದಾನವಾಗಿದೆ……