Breaking News

ಬೆಂಗಳೂರು ಏರ್‌ಪೋರ್ಟ್‌ಗೆ ಮೆಟ್ರೊ..!

ಹೆಬ್ಬಾಳ ಮೂಲಕವೇ ರೂಟ್‌ ಫೈನಲ್‌....

SHARE......LIKE......COMMENT......

ಬೆಂಗಳೂರು:

ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮೆಟ್ರೊ ರೈಲು ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಮತ್ತೊಂದು ಹೆಜ್ಜೆ ಮುಂದಿಡಲಾಗಿದೆ.ಮೆಟ್ರೊ ರೈಲು ಸಾಗುವ ಮಾರ್ಗದ ಬಗ್ಗೆ ಇದ್ದ ಗೊಂದಲವನ್ನು ನಿವಾರಿಸಲಾಗಿದ್ದು, ಹಿಂದಿನ ವಿನ್ಯಾಸದಲ್ಲಿದ್ದ ಆರ್‌.ಕೆ. ನಗರ ಬದಲು ಹೆಬ್ಬಾಳ ಮೂಲಕವೇ ಮಾರ್ಗ ನಿರ್ಮಿಸಲು ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ.

ಇದರೊಂದಿಗೆ ಪ್ರತಿದಿನ ಲಕ್ಷಾಂತರ ವಿಮಾನ ಪ್ರಯಾಣಿಕರು ಮತ್ತು ಮಾರ್ಗದ ನಡುವಿನ ಊರಿನ ನಿವಾಸಿಗಳಿಗೆ ನಿರಾಳ ಪ್ರಯಾಣದ ಹಾದಿ ತೆರೆದುಕೊಳ್ಳುವ ಭರವಸೆ ಮೂಡಿದೆ.

ಈ ಹಿಂದೆ ಏರ್‌ಪೋರ್ಟ್‌ಗೆ ಹೈ ಸ್ಪೀಡ್‌ ರೈಲು ಸಂಪರ್ಕ ಕಲ್ಪಿಸುವ ಪ್ರಯತ್ನ ನಡೆದಿತ್ತು. ಎಂ.ಜಿ. ರಸ್ತೆಯಿಂದ ಆರಂಭವಾಗಿ ರಾಜಭವನ ರಸ್ತೆ, ಯಲಹಂಕ ಮಾರ್ಗವಾಗಿ ಏರ್‌ಪೋರ್ಟ್‌ಗೆ ಹೈ ಸ್ಪೀಡ್‌ ರೈಲು ಮಾರ್ಗ ನಿರ್ಮಿಸಲು ನಕ್ಷೆ ತಯಾರಿಸಲಾಗಿತ್ತು. ರಾಷ್ಟ್ರೀಯ ಹೆದ್ದಾರಿ-44 ನ್ನು ಚತುಷ್ಪಥ ರಸ್ತೆಯನ್ನಾಗಿಸಿದ ವೇಳೆ ಹೈಸ್ಪೀಡ್‌ ರೈಲಿಗಾಗಿ ಭೂ ಸ್ವಾಧೀನ ಮಾಡಿಕೊಳ್ಳಲಾಗಿತ್ತು. ಬಳಿಕ ಮೆಟ್ರೊ ಯೋಜನೆ ಬಂದಾಗ ಹೈ ಸ್ಪೀಡ್‌ ರೈಲಿನ ಪ್ರಸ್ತಾಪ ಕೈ ಬಿಡಲಾಗಿತ್ತು.

ಹೆಬ್ಬಾಳದಿಂದ ಮೆಟ್ರೊ ಮಾರ್ಗ ಸಾಗುವುದನ್ನು ಖಚಿತಪಡಿಸಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್‌, 15 ದಿನದೊಳಗೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಇದರ ಬಗ್ಗೆ ಚರ್ಚಿಸಲಾಗುವುದು ಎಂದರು……