Breaking News

ರೆಕಾರ್ಡ್​ ಬ್ರೇಕ್ ಮಾಡಿದ ಚಾಲೆಂಜಿಂಗ್ ಸ್ಟಾರ್..!

ಡಿ ಬಾಸ್ ಫ್ಯಾನ್ಸ್ ಜೊತೆ ಇಡೀ ಕನ್ನಡ ಸಿನಿಪ್ರಿಯರು ದಿಲ್ ಖುಷ್....

SHARE......LIKE......COMMENT......

ಸ್ಯಾಂಡಲ್‌ವುಡ್:

30ಕ್ಕೂ ಅಧಿಕ ಸ್ಟಾರ್ ಕಲಾವಿದರು. ನೂರಾರು ತಂತ್ರಜ್ಞರ ಎರಡು ವರ್ಷದ ತಪ್ಪಸ್ಸಿನ ಫಲ ಕುರುಕ್ಷೇತ್ರ ಸಿನಿಮಾ. ನಿರ್ಮಾಪಕ ಮುನಿರತ್ನ ಡ್ರೀಮ್ ಪ್ರಾಜೆಕ್ಟ್​ ಇದಾಗಿದ್ದು, ಆ ಕನಸು ನನಸಾಗಿಸೋಕ್ಕೆ ಇಡೀ ಚಿತ್ರತಂಡ ಹಗಲಿರುಳು ಸಿನಿಮಾ ಧ್ಯಾನ ಮಾಡಿದೆ. ನಿರೀಕ್ಷೆಗೂ ಮೀರಿದ ಎಫರ್ಟ್​ ಹಾಕಿದೆ. ಅದರ ಪ್ರತಿಫಲಕ್ಕೆ ಇಂದು ಪ್ರೇಕ್ಷಕ ಮಹಾಶಯರಿಂದ ಶಿಳ್ಳೆ- ಚಪ್ಪಾಳೆಗಳ ಸತ್ಕಾರ, ಪುರಸ್ಕಾರ ಸಿಗ್ತಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್​ರ 50ನೇ ಸಿನಿಮಾ ಈ ಮಹಾದೃಶ್ಯಕಾವ್ಯ. ಸಂಗೊಳ್ಳಿ ರಾಯಣ್ಣ ಚಿತ್ರದ ನಂತರ ದರ್ಶನ್ ಈ ರೀತಿಯ ವಿಭಿನ್ನ ಕಥಾನಕಕ್ಕೆ ಕೈಹಾಕಿದರು. ಹಾಗಾಗಿ ಅದರ ನಿರೀಕ್ಷೆ ಕೂಡ ಮುಗಿಲು ಮುಟ್ಟಿತ್ತು. ಇದೀಗ ದಚ್ಚು ಈ ವಿಭಿನ್ನ ಆಯ್ಕೆ, ಕುರುಕ್ಷೇತ್ರಕ್ಕೆ ಅಂದುಕೊಂಡಂತೆ ಪ್ರಶಂಸೆ ಮತ್ತು ಪ್ರತಿಕ್ರಿಯೆಗಳ ಮಹಾಪೂರವೇ ಹರಿದುಬರ್ತಿದೆ. ಮತ್ತೊಮ್ಮೆ ಡಿ ಬಾಸ್ ಫ್ಯಾನ್ಸ್ ಜೊತೆ ಇಡೀ ಕನ್ನಡ ಸಿನಿಪ್ರಿಯರು ದಿಲ್ ಖುಷ್ ಆಗಿದ್ದಾರೆ.

2ಡಿ ಜೊತೆ ತ್ರೀಡಿಗೂ ಕೈಹಾಕಿ, ಗಾಸಿಪ್​ಗಳಿಗೆ ಆಹಾರವಾಗಿದ್ದ ಕುರುಕ್ಷೇತ್ರ ಟೀಂ, ಇದೀಗ ತಮ್ಮ ಗತ್ತು ಗೈರತ್ತು ಎಂಥದ್ದು ಅನ್ನೋದನ್ನು ಪ್ರೂವ್ ಮಾಡಿದೆ. ಮಕ್ಕಳಿಂದ ಹಿರಿಯರವರೆಗೆ ಸಿನಿಮಾ ನೋಡಿದವರು ಭೇಷ್ ಅಂತ ಬೆನ್ನು ತಟ್ಟುತ್ತಿದ್ದಾರೆ.

ಒಂದೇ ದಿನ ಕನ್ನಡ ಮತ್ತು ತೆಲುಗಿನಲ್ಲಿ ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಂಡ ಕುರುಕ್ಷೇತ್ರ, ಬಾಕ್ಸಾಫೀಸ್ ಧೂಳೆಬ್ಬಿಸ್ತಿದೆ. ಕರ್ನಾಟಕದ 400 ಹಾಗೂ ಆಂಧ್ರದ 300 ಸ್ಕ್ರೀನ್ಸ್​ನಲ್ಲಿ ಸದ್ಯ ದರ್ಬಾರ್ ಮಾಡ್ತಿರೋ ದುರ್ಯೋಧನ, ಮೊದಲ ವಾರದಲ್ಲಿ 1500ಕ್ಕೂ ಅಧಿಕ ಶೋಗಳ ಮೂಲಕ ಬರೋಬ್ಬರಿ 30ಕೋಟಿ ದಾಖಲೆ ಕಲೆಕ್ಷನ್ ಮಾಡಿದೆ.

ವರಮಹಾಲಕ್ಷ್ಮೀ ಹಬ್ಬಕ್ಕೆ ಕನ್ನಡ ಮತ್ತು ತೆಲುಗಿನಲ್ಲಿ ಗ್ರ್ಯಾಂಡ್ ರಿಲೀಸ್ ಆದ ಕುರುಕ್ಷೇತ್ರ ಸಿನಿಮಾ, ಚಿತ್ರತಂಡದ ಪ್ಲ್ಯಾನ್​ನಂತೆ ಈ ವಾರ ತಮಿಳಿನಲ್ಲಿ ರಿಲೀಸ್ ಆಗಿದೆ. ಚಿತ್ರತಂಡ ತಂತ್ರಜ್ಞರು ಹಾಗೂ ಕಲಾವಿದರೊಟ್ಟಿಗೆ ಚೆನ್ನೈಗೇ ಹೋಗಿ ಪ್ರಮೋಷನಲ್  ಆ್ಯಕ್ಟಿವಿಟೀಸ್ ಮಾಡಿಬಂದಿದರು. ಅದ್ರಂತೆ ಅಲ್ಲಿಯೂ ಸಹ ನಮ್ಮ ಹೆಮ್ಮೆಯ ಕುರುಕ್ಷೇತ್ರಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಒಂದಷ್ಟು ಮಂದಿ ಕನ್ನಡದ ಜೊತೆ ಜೊತೆಗೆ ಎಲ್ಲಾ ಭಾಷೆಯಲ್ಲೂ ಏಕಕಾಲದಲ್ಲಿ ರಿಲೀಸ್ ಮಾಡಬೇಕಿತ್ತು ಅಂತ ಗೊಣಗಿಕೊಳ್ತಿದ್ರು. ಆದ್ರೆ ಮುನಿರತ್ನ ಹಾಗೂ ರಾಕ್​ಲೈನ್ ಹಂತ ಹಂತವಾಗಿ, ಪಕ್ಕಾ ಪ್ಲ್ಯಾನ್ಡ್ ಆಗಿ ರಿಲೀಸ್ ಮಾಡ್ತಿದ್ದಾರೆ. ಹಿಂದಿಯಲ್ಲೂ ದೊಡ್ಡ ಮಟ್ಟದಲ್ಲೇ ರಿಲೀಸ್ ಪ್ಲ್ಯಾನ್ ಮಾಡ್ತಿದ್ದು, ಲೇಟ್ ಆದ್ರೂ ಲೇಟೆಸ್ಟ್ ಆಗಿ ಬಿಟೌನ್ ಹೊಕ್ಕಲಿದ್ದಾರೆ ದುರ್ಯೋಧನ ಅನ್ನೋದು ಮಾತ್ರ ಖಾತರಿ ಆಗಿದೆ……