ಮಂಡ್ಯ:
ಲೋಕಸಭಾ ಚುನಾವಣೆಗೆ ಸುಮಲತಾ ಅಂಬರೀಶ್..! ಯೆಸ್ ಚಿತ್ರರಂಗದ ಗಣ್ಯರಿಂದ ಸುಮಲತಾರನ್ನ ಚುನಾವಣೆಗೆ ಸ್ಪರ್ಧಿಸಲು ಒತ್ತಾಯಿಸಿದ್ದಾರೆ ..
ಹೌದು ಜ.13 ರಂದು ನಡೆದ ಅಂಬರೀಷ್ ನುಡಿ ನಮನ ಕಾರ್ಯಕ್ರಮದ ನಂತರ ಚಿತ್ರರಂಗದ ಪ್ರಮುಖರು ಹಾಗೂ ರಾಜಕೀಯ ಗೆಳಯರು ಸುಮಲತಾರನ್ನ ಚುನಾವಣೆಗೆ ಸ್ಪರ್ಧಿಸಬೇಕೆಂದು ಆಗ್ರಹಿಸಿದ್ದಾರೆ .. ಅಂಬರೀಷ್ ಅವರಿಗೆ ಅವರದ್ದೇ ಅಭಿಮಾನಿಗಳಿದ್ದಾರೆ ಅವರ ಹೆಸರನ್ನು ಉಳಿಸಬೇಕು ,ಯಾವುದಾದರೂ ಪಕ್ಷದಿಂದ ಸ್ಪರ್ಧಿಸಿ, ಯಾವುದೇ ಪಕ್ಷ ಬೇಡ ಎನ್ನುವುದಾದರೆ ಸ್ವತಂತ್ರ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ, ಚುನಾವಣೆ ಜವಾಬ್ದಾರಿಯನ್ನು ನಾವು ವಹಿಸಿಕೊಳ್ಳುತ್ತೇವೆ ಎಂದು ಗಣ್ಯರು ಸೂಚಿಸಿದ್ಗಾರೆ..
ಕೆಲವು ಖಾಸಗಿ ಸುದ್ದಿವಾಹಿನಿಯ ವರದಿಯ ಪ್ರಕಾರ ಸುಮಲತಾ ಸಹ ಚಿತ್ರರಂಗದ ಗಣ್ಯರ ಒತ್ತಾಯಕ್ಕೆ ಸಮ್ಮತಿ ಸೂಚಿಸಿದ್ದು ಕಾಲಬಂದಾಗ ಸೂಕ್ತ ನಿರ್ಣಯ ಪ್ರಕಟಿಸುವರು ಎಂದು ಭರವಸೆ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತದೆ….