ಉಡುಪಿ:
ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಬ್ಯುಸಿಯಾಗಿ ಬಳಲಿರೋ ಸಿಎಂ ಕುಮಾರಸ್ವಾಮಿ ಅವರು ರಿಲ್ಯಾಕ್ಸ್ ಮೂಡ್ಗೆ ಜಾರಿದ್ದಾರೆ. ಉಡುಪಿಯ ಹೆಲ್ತ್ ರಿಸಾರ್ಟ್ಗೆ ಸಿಎಂ ಕುಮಾರಸ್ವಾಮಿ ಭೇಟಿ ನೀಡಿದ್ದು, ಕಾಪುವಿನ ಮೂಳೂರಿನಲ್ಲಿರುವ ಸಾಯಿ ರಾಧಾ ರಿಸಾರ್ಟ್ನಲ್ಲೇ ನಾಲ್ಕೈದು ದಿನ ತಂಗುವ ಸಾಧ್ಯತೆ ಇದೆ. ಕಳೆದ ಭಾನುವಾರ ಸಿಎಂ ಕುಮಾರಸ್ವಾಮಿ ಚುನಾವಣಾ ಪ್ರಚಾರ ಮುಗಿಸಿಕೊಂಡು ಎರಡು ದಿನ ಇದೇ ರೆಸಾರ್ಟ್ನಲ್ಲಿ ತಂಗಿದ್ದರು. ಪ್ರಾಥಮಿಕ ಚಿಕಿತ್ಸೆ ಪೂರೈಸಿ ವಾರದ ನಂತರ ಬರುವುದಾಗಿ ತಿಳಿಸಿದ್ದರು. ಅಂತೆಯೇ ಪುನಃ ಪಂಚಕರ್ಮ ಚಿಕಿತ್ಸೆಗೆ ಆಗಮಿಸಿದ್ದಾರೆ……