Breaking News

ಸ್ಯಾಂಡಲ್‌ವುಡ್‌ಗೆ ಮತ್ತೆ ಡಬ್ಬಿಂಗ್ ಭೂತ ಎಂಟ್ರಿ..!?

ತೆಲುಗು-ತಮಿಳು ಸಿನಿಮಾ ಡಬ್ಬಿಂಗ್‌ಗೆ ಸಜ್ಜು...

SHARE......LIKE......COMMENT......

ಸಿನಿಮಾ:

ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಪೆಟ್ಟಾ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಿ ಧೂಳೆಬ್ಬಿಸುತ್ತಿದ್ದು ಪರಭಾಷಾ ನಿರ್ಮಾಪಕರು ಸಹ ತಮ್ಮ ಚಿತ್ರವನ್ನು ಕನ್ನಡದಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ.ಪೆಟ್ಟಾ ಕನ್ನಡ ಡಬ್ಬಿಂಗ್ ಆವೃತ್ತಿಯ ಚಿತ್ರ ಕರ್ನಾಟಕದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.ಮೂಲಗಳ ಪ್ರಕಾರ, ಚಿತ್ರದ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಮತ್ತು ನಿರ್ದೇಶಕ ಕಲಾನಿಧಿ ಮಾರನ್ ಅದಾಗಲೇ ಕನ್ನಡದ ಡಬ್ಬಿಂಗ್ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಇದರ ಬೆನ್ನಲ್ಲೇ ತೆಲುಗಿನ ನಟ ರಾಮ್ ಚರಣ್ ತೇಜಾ ನಟನೆಯ ವಿನಯ ವಿದ್ಯಾ ರಾಮ ಚಿತ್ರ ಸಹ ಕನ್ನಡದ ಡಬ್ಬಿಂಗ್ ಆವೃತ್ತಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಕರ್ನಾಟಕದ ಮಟ್ಟಿಗೆ ಡಬ್ಬಿಂಗ್ ಅನ್ನು ಕನ್ನಡಿಗರು ವಿರೋಧಿಸುತ್ತಲೆ ಬಂದಿದ್ದಾರೆ. ಇದೀಗ ಪರಭಾಷಿಗರು ತಮ್ಮ ಚಿತ್ರಗಳನ್ನು ಕನ್ನಡದಲ್ಲಿ ಡಬ್ ಮಾಡಿ ಬಿಡುಗಡೆ ಮಾಡುತ್ತಿದ್ದು ಕನ್ನಡಿಗರು ಒಪ್ಪಿಕೊಳ್ಳುತ್ತಾರೋ? ಇಲ್ಲವೋ? ಕಾದು ನೋಡಬೇಕಿದೆ……